ಜಿಲ್ಲಾಮಟ್ಟದ ಮಧ್ಯಪಾನ ವಿರೋಧಿ ಅಂದೋಲನ ಅ.9ರಿಂದ ಪ್ರಾರಂಭ

ಚಳ್ಳಕೆರೆ

     ಕೆಟ್ಟ ಚಟಗಳಿಗೆ ಈಡಾದ ವ್ಯಕ್ತಿ ಸಂಸಾರ ನಡೆಸಲು ಸಾಧ್ಯವಾಗುವುದಿಲ್ಲ. ಕಾರಣ ಅವನದೇಯಾದ ಲೋಕದಲ್ಲಿ ಅವನು ಮನೆಯರಿಗೆಲ್ಲಾ ಕಿರುಕುಳ ನೀಡುತ್ತಾನಲ್ಲದೆ ಸಮಾಜದ ಹಿತದೃಷ್ಠಿಯಿಂದಲೂ ಸಹ ಅಗೌರವಕ್ಕೆ ಪಾತ್ರನಾಗುತ್ತಾನೆ. ಆದ್ದರಿಂದ ಕುಡಿತ ಹಾಗೂ ಇನ್ನಿತರೆ ದುಶ್ಚಟಗಳಿಂದ ಅವನನ್ನು ದೂರ ಮಾಡಿ, ಅವನನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಕಳೆದ 1992ರಿಂದ ಕರ್ನಾಟಕ ಜನ ಜಾಗೃತಿ ವೇದಿಕೆ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜಾಗೃತಿಯನ್ನು ನಡೆಸಿ ಅವನನ್ನು ಪರಿವರ್ತನೆ ಮಾಡುವ ಕಾರ್ಯವನ್ನು ನಡೆಸುತ್ತಾ ಬಂದಿದ್ದು, ಈ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಿ.ಗಣೇಶ್ ತಿಳಿಸಿದರು.

      ಅವರು, ಗುರುವಾರ ಸಾಯಿಬಾಬಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರಕ್ಕೆ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯವನ್ನು ತಂಡುಕೊಟ್ಟ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಕ್ಟೋಬರ್ 2ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಂತೆ ದುಶ್ಚಟಗಳಿಗೆ ಈಡಾಡವರನ್ನು ಪರಿವರ್ತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ನಮ್ಮ ಸಂಸ್ಥೆ ಜನಜಾಗೃತಿ ಅಂದೋಲನದ ಮೂಲಕ ಮುಂದುವರೆಸಿದೆ ಎಂದರು.

      ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಮಾತನಾಡಿ, ಜಿಲ್ಲಾ ಮಟ್ಟದ ಮಧ್ಯಪಾನ ವಿರೋಧಿ ಆಂದೋಲನವನ್ನು ಚಳ್ಳಕೆರೆ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಗುರುವಾರ ಪೂರ್ವ ಭಾವಿ ಸಭೆ ಹಮ್ಮಿಕೊಂಡಿದ್ದು, ಜಿಲ್ಲಾ ಮಟ್ಟದ ಈ ಅಂದೋಲನ ಅಕ್ಟೋಬರ 9 ರಿಂದ ಪ್ರಾರಂಭವಾಗಿ 16 ರ ತನಕ ಸಾಯಿ ಬಾಬಾ ಮಂದಿರದಲ್ಲಿ ನಡೆಯಲಿದೆ.

     ಜಿಲ್ಲೆಯಲ್ಲಿ ಈಗಾಗಲೇ ಇಂತಹ 20ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಯಶಸ್ಸಿಯಾಗಿ ನಡೆಸಲಾಗಿದೆ. ಇದರ ಪ್ರತಿಫಲವಾಗಿ 1656 ಶಿಬಿರಾರ್ಥಿಗಳು ಭಾಗವಹಿಸಿದ್ದು, 1970ಕ್ಕೂ ಹೆಚ್ಚು ಸದಸ್ಯರು ಕುಡಿತವನ್ನು ಕೈಬಿಟ್ಟಿದ್ಧಾರೆ. ಮಧ್ಯಪಾನ ಹಾಗೂ ಇನ್ನಿತರೆ ದುಶ್ಚಟಗಳು ವ್ಯಕ್ತಿಯ ಅವನತಿಯ ಜೊತೆಗೆ ಇಡೀ ಸಂಸಾರವೇ ಸಂಕಷ್ಟಕ್ಕೆ ಸಿಲುವುದರಿಂದ ಇದನ್ನು ತಪ್ಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.9ರ ಸೋಮವಾರ ಬೆಳಗ್ಗೆ 9ಕ್ಕೆ ಬಳ್ಳಾರಿ ರಸ್ತೆಯ ಚಳ್ಳಕೆರೆಯಮ್ಮ ದೇವಸ್ಥಾನದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಷಡಾಕ್ಷರಪ್ಪ, ಜಿಲ್ಲಾ ಸಮಿತಿ ಸದಸ್ಯ ನೇತಾಜಿ ಪ್ರಸನ್ನ, ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ವೆಂಕಟ ಸಾಯಿ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷ ಕೆ.ಎಂ.ಜಗದೀಶ್, ಕಾರ್ಯದರ್ಶಿ ರವಿಪ್ರಸಾದ್, ನಿರ್ದೇಶಕ ಹೂವಿನ ಜಗದೀಶ್, ನಾಗೇಶ್, ಚಿದಾನಂದಮೂರ್ತಿ, ದೇವರಾಜು ಸಿಂಧೆ, ತಾಲ್ಲೂಕು ಯೋಜನಾಧಿಕಾರಿ ಚನ್ನಪ್ಪಗೌಡ ಮುಂತಾದವರು ಉಪಸ್ಥಿತರಿದ್ದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link