ಕುರಿಪಾಳ್ಯದಲ್ಲಿ ಯಶಸ್ವಿ ಆರೋಗ್ಯ ಶಿಬಿರ: ಬಡವರ ಚಿಕಿತ್ಸಾ ವೆಚ್ಚಕ್ಕೆ ಸದಸ್ಯರ ನೆರವು

ತುಮಕೂರು

      ತುಮಕೂರು ನಗರದ 13 ನೇ ವಾರ್ಡ್ ವ್ಯಾಪ್ತಿಯ ಕುರಿಪಾಳ್ಯದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಸ್ಥಳೀಯ ಆರೋಗ್ಯ ಕೇಂದ್ರ ಮತ್ತು 13 ನೇ ವಾರ್ಡ್‌ನ ಮಹಾನಗರ ಪಾಲಿಕೆ ಸದಸ್ಯೆ ರೀದಾ ಬೇಗಂ ಅವರ ಸಹಕಾರದಲ್ಲಿ ಗುರುವಾರ ಏರ್ಪಟ್ಟಿದ್ದ ‘‘ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ’’ದಲ್ಲಿ ಆ ‘ಾಗದ ಸುಮಾರು 800 ಕ್ಕೂ ಅಧಿಕ ನಾಗರಿಕರು ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆದುಕೊಂಡರು.

       ಈ ಸಂದ‘ರ್ದಲ್ಲಿ ಮಾತನಾಡಿದ ಪಾಲಿಕೆ ಸದಸ್ಯೆ ರೀದಾ ಬೇಗಂ ಮತ್ತು ಅವರ ಪತಿ ಮಾಜಿ ಮಹಾನಗರ ಪಾಲಿಕೆ ಸದಸ್ಯ ಮಹಮದ್ ಹಫೀಜ್ ಅವರು, ಈ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಂಡಿರುವ ಈ ವಾರ್ಡ್‌ನ ಬಡವರಿಗೆ ಯಾರಿಗಾದರೂ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಶಿಾರಸು ಮಾಡಿದ್ದರೆ, ಅಂತಹವರಲ್ಲಿ ಕೆಲವು ಸಂಖ್ಯೆಯ ಬಡವರಿಗೆ ಅಧರ್ದಷ್ಟು ಚಿಕಿತ್ಸಾ ವೆಚ್ಚವನ್ನು ತಾವು ಭರಿಸುವುದಾಗಿ ಭರವಸೆ ನೀಡಿದರು.

      ‘‘ಜನರ ಆರೋಗ್ಯ ಬಹು ಮುಖ್ಯವಾದುದು. ಜನರಲ್ಲಿ ಆರೋಗ್ಯ ಪ್ರಜ್ಞೆ ಇರಬೇಕು. ಆದ್ದರಿಂದ ಈ ಶಿಬಿರಕ್ಕೆ ನಾವು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಅಲ್ಲದೆ ಈ ವಾರ್ಡ್‌ನ ಮನೆ-ಮನೆಗೆ ಖುದ್ದಾಗಿ ನಾನು ತೆರಳಿ ಪ್ರತಿಯೊಬ್ಬರೂ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡೆ. ಅದಕ್ಕೆ ಸ್ಪಂದಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಬಂದಿದ್ದಾರೆ’’ ಎಂದು ಸದಸ್ಯೆ ರೀದಾ ಬೇಗಂ ಹೇಳಿದರು.

          ಸಿದ್ಧಾರ್ಥ ಆಸ್ಪತ್ರೆಯ ಪ್ರಭಾರ ಪ್ರಿನ್ಸಿಪಾಲ್ ಡಾ.ಪ್ರಭಾಕರ್ ಅವರು ಮಾತನಾಡುತ್ತ, ‘‘ನಮ್ಮ ಆಸ್ಪತ್ರೆ ವತಿಯಿಂದ ಈ ಶಿಬಿರವನ್ನು ಸ್ಥಳೀಯರ ಸಹಕಾರದಿಂದ ನಡೆಸಲಾಗುತ್ತಿದೆ. ಇಲ್ಲಿ ಬರುವವರಿಗೆ ಆರೋಗ್ಯ ತಪಾಸಣೆ ನಡೆಸಿ ತಾತ್ಕಾಲಿಕವಾಗಿ ಉಚಿತ ಔಷಧೋಪಚಾರ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಅಂಥವರಿಗೆ ನಮ್ಮ ಆಸ್ಪತ್ರೆಗೆ ಬರುವಂತೆ ಸೂಚಿಸಿ, ಅಲ್ಲಿಯೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಮತ್ತೆ ಕೆಲವರಿಗೆ ಶಸ್ತ್ರಚಿಕಿತ್ಸೆ ಅನಿವಾರ್ಯವಿದ್ದಲ್ಲಿ ಅಂಥವರಿಗೆ ಶೇ. 50 ರಷ್ಟು ರಿಯಾಯಿತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಮಿಕ್ಕ ಶೇ. 50 ರಷ್ಟು ವೆಚ್ಚವನ್ನು ಈ ಭಾಗದ ಪಾಲಿಕೆ ಸದಸ್ಯರು ‘ರಿಸುವುದಾಗಿ ‘ರವಸೆ ನೀಡಿದ್ದಾರೆ’’ ಎಂದು ಹೇಳಿದರು.

        ಆಸ್ಪತ್ರೆಯ ಪ್ರೊೆಸರ್ ಮತ್ತು ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಅಯ್ಯಂಗಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೋದಂಡಸ್ವಾಮಿ , ಉಪನ್ಯಾಸಕ ಜಿ.ಪ್ರಾಣೇಶ್, ಕುರಿಪಾಳ್ಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಮೊದಲಾದವರು ಉಪಸ್ಥಿತರಿದ್ದರು.

       ಈ ಶಿಬಿರದಲ್ಲಿ ಸಾಮಾನ್ಯ ರೋಗ ತಜ್ಞ ಡಾ.ಲೋಕೇಶ್, ಶಸ್ತ್ರಚಿಕಿತ್ಸಾ ತಜ್ಞ ಡಾ.ಚಂದನ್, ಸ್ತ್ರೀ ಹಾಗೂ ಪ್ರಸೂತಿ ಚಿಕಿತ್ಸಾ ತಜ್ಞ ಡಾ.ಹೇಮಾ, ಕೀಲು ಮತ್ತು ಮೂಳೆ ರೋಗ ತಜ್ಞ ಡಾ. ವೀರಣ್ಣ, ಮಕ್ಕಳ ಚಿಕಿತ್ಸಾತಜ್ಞೆ ಡಾ.ಮಾನಸ, ಕಣ್ಣಿನ ತಜ್ಞೆ ಡಾ. ನಿಹಾರಿಕಾ, ಚರ್ಮ ರೋಗ ಮತ್ತು ಗುಹ್ಯರೋಗಗಳ ತಜ್ಞೆ ಡಾ.ವೀಣಾ, ಕಿವಿ,ಮೂಗು ಮತ್ತು ಗಂಟಲು ತಜ್ಞೆ ಡಾ.ನಿರೀನ್, ಮನೋರೋಗ ಚಿಕಿತ್ಸಾ ತಜ್ಞ ಡಾ. ಹೇಮಂತ ಕುಮಾರ್, ದಂತ ಚಿಕಿತ್ಸಾ ತಜ್ಞ ಡಾ.ಮೋಹನ್ ಕುಮಾರ್ ಸೇರಿದಂತೆ ಸುಮಾರು 40 ಕ್ಕೂ ಅಧಿಕ ಸಿಬ್ಬಂದಿವರ್ಗದವರು ರೋಗಿಗಳ ತಪಾಸಣೆ ನಡೆಸಿದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link