ಭಗವದ್ಗೀತೆಯಲ್ಲೂ ಪರಿಸರ ಸಂರಕ್ಷಣೆ ಬಗ್ಗೆ ಉಲ್ಲೇಖ

ದಾವಣಗೆರೆ:

      ಭಗವದ್ಗೀತೆಯಲ್ಲೂ ಪರಿಸರ ಸಂರಕ್ಷಣೆ ಬಗ್ಗೆ ಎಂದೋ ಉಲ್ಲೇಖಿಸಲಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ಡಿ ಆರ್ ಕುಮಾರಸ್ವಾಮಿ ತಿಳಿಸಿದರು.

      ನಗರದ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದ ಜಿ.ಎಂ ಹಾಲಮ್ಮ ಸಭಾಂಗಣದಲ್ಲಿ ಶುಕ್ರವಾರ ಕಾಲೇಜಿನ ಸಿವಿಲ್ ವಿಭಾಗದ ಫೂೀರಂ “ಪಿರಾಮಿಡ್” ಉದ್ಘಾಟಿಸಿ ಮಾತನಾಡಿದ ಅವರು, ಭಗವದ್ಗೀತೆ ಶ್ಲೋಕಗಳನ್ನು ನಿರರ್ಗಳವಾಗಿ ಪಠಿಸಿ, ಅದರಲ್ಲಿನ ಪರಿಸರಸ್ನೇಹಿ ಅರ್ಥವನ್ನು ಬಿಚ್ಚಿಟ್ಟರು. ಗೀತೆಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಎಂದೋ ಉಲ್ಲೇಖಿಸಲಾಗಿದೆ. ಆದರೆ, ಭೂಮಿ ಸೃಷ್ಟಿಯಾಗಿ 4000 ದಶಲಕ್ಷ ವರ್ಷಗಳೇ ಕಳೆದರೂ ಭಾರತದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಒಂದು ಕಾಯ್ದೆ ತರಲು 1985 ರ ವರೆಗೂ ಕಾಯಬೇಕಾಯ್ತು ಎಂದು ಭಾರತೀಯರ ಮನಸ್ಥಿತಿಯನ್ನು ಟೀಕಿಸಿದರು.

     ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಎಚ್. ಎಸ್. ಗೋವರ್ಧನಸ್ವಾವಿ ಮಾತನಾಡಿ, ಮೊದಲನೇ ಸೆಮಿಸ್ಟರ್ ಮತ್ತು ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು. ಮನೆಯಲ್ಲಿ ಹೇಗೆ ಅಜ್ಜ-ಅಜ್ಜಿ, ತಂದೆ-ತಾಯಿ ಗೆ ಗೌರವದಿಂದ ಕಾಣುತ್ತೀರೋ ಹಾಗೆಯೇ ನಿಮ್ಮ ಗುರುಗಳನ್ನು ಗೌರವಿಸಬೇಕು ಎಂದು ತಿಳಿ ಹೇಳಿದರು.

    ಪೋರಮ್‍ನ ಸಂಯೋಜಕ ಕಿರಣ್ ಕುಮಾರ್.ಸಿ.ಎಂ ಪೋರಮ್‍ನ ಸಂಕ್ಷಿಪ್ತ ವರದಿಯನ್ನು ವಾಚಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ|| ಪಿ.ಪ್ರಕಾಶ್, ಸಿವಿಲ್ ಇಂಜಿನಿಯರ್ ಆದವನು ಜನರಲ್ ಇಂಜಿನಿಯರ್ ಇದ್ದಂತೆ, ಎಲ್ಲಾ ವಿಧದ ಜ್ಞಾನವನ್ನು ಸಂಪಾದಿಸಬೇಕಾಗುತ್ತದೆ, ಇದಕ್ಕಾಗಿ ಇಂಟರ್ನೆಟ್ ನಲ್ಲಿ ಲಭ್ಯವಿರುದ ಪಠ್ಯೇತರ ಜ್ಞಾನವನ್ನು ತಿಳಿದುಕೊಳ್ಳಬೇಕು ಎಂದರು.
ಸಿವಿಲ್ ವಿಭಾಗದ ವಿದ್ಯಾರ್ಥಿ ಶರತ್ ಪ್ರಾರ್ಥಿಸಿದರು, ಮಾರುತಿ ನಾಯ್ಕ್ ಮತ್ತು ವಿನುತಾ ನಿರೂಪಿಸಿದರು, ಚಂದನ ಸ್ವಾಗತಿಸಿದರು, ರಚನಾ ವಂದಿಸಿದರು

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link