ಲೈವ್ ಬ್ಯಾಂಡ್ ಮತ್ತು ಎರಡು ಡಾನ್ಸ್ ಬಾರ್‍ಗಳ ಮೇಲೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು:

       ಅಕ್ರಮವಾಗಿ ನಡೆಸುತ್ತಿದ್ದ ಎರಡು ಲೈವ್ ಬ್ಯಾಂಡ್ ಮತ್ತು ಎರಡು ಡಾನ್ಸ್ ಬಾರ್‍ಗಳ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ದಾಳಿ ನಡೆಸಿ ನೇಪಾಳಿ ಮೂಲದ ಮಹಿಳೆ ಸೇರಿ 36 ಮಹಿಳೆಯರನ್ನು ರಕ್ಷಿಸಿ ಮೂವರು ಬೌನ್ಸರ್, ಓರ್ವ ಡಿಜೆ ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ.

      ದಾಳಿ ನಡೆಸಿದ ಎರಡು ಲೈವ್ ಬ್ಯಾಂಡ್ ಮತ್ತು ಎರಡು ಡಾನ್ಸ್ ಬಾರ್‍ಗಳಲ್ಲಿ ನಿಯಮಗಳನ್ನು ಉಲ್ಲಂಘಸಿ ಕಾನೂನು ಬಾಹಿರವಾಗಿ ಹೊರ ಹೊರಗಡೆಯಿಂದ ಮಹಿಳೆಯರನ್ನು ಮಾನವ ಸಾಗಣೆ ಮೂಲಕ ಕರೆತಂದು ಅಶ್ಲೀಲ ನೃತ್ಯ ನಡೆಸುತ್ತಿರುವುದು ಪತ್ತೆಯಾಗಿದೆ.
ಬಂಧಿತರಿಂದ 8,02,300ನಗದು 2 ನಗದು ಎಣಿಕೆ ಯಂತ್ರ, 1 ಎಟಿಎಂ ಸ್ವೈಪಿಂಗ್ ಯಂತ್ರ ಸೇರಿ ಇತರೇ ಸಂಗೀತ ಪರಿಕರಗಳ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ

      ಅಶೋಕನಗರದ ಮೆಹಂದಿ ಬಾರ್ & ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ವಿವಿಧ ರಾಜ್ಯಗಳ ಒಟ್ಟು 9 ಮಹಿಳೆಯರನ್ನು ಸಂರಕ್ಷಿಸಿ, ಈ ಸಂಬಂಧ ಅಲ್ಲಿ ಬೌನ್ಸರ್‍ಗಳಾಗಿ ಕೆಲಸ ಮಾಡುತ್ತಿದ್ದ ಸೂರಜ್, ಅರ್ಜುನ್, ಸಂತೋಷ್ ಶೆಟ್ಟಿ ಹಾಗೂ ಇತರೇ ಕೆಲಸಗಾರರಾದ ಕ್ಯಾಪ್ಟನ್ ಅಪ್ಪಚ್ಚು, ನಿತಿನ್ ಸಿಂಗ್ ಮತ್ತು ಪ್ರಿನ್ಸ್ ರಾಥೋಡ್ ಸೇರಿ 6 ಮಂಧಿಯನ್ನು ಬಂಧಿಸಲಾಗಿದೆ.

      ದಾಳಿಯಲ್ಲಿ ನಗದು 2,09,50, 50 ರೂ ಮುಖ ಬೆಲೆಯ 150 ಟೋಕನ್‍ಗಳು, 6 ಡಿವಿಆರ್, ಒಂದು ಮಿಕ್ಸ್‍ರ್ ಹಾಗೂ ಒಂದು ಎಟಿಎಂ ಸ್ವೈಪಿಂಗ್ ಮಿಷನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.ಕಬ್ಬನ್‍ಪಾರ್ಕ್‍ನ ಸೆಂಟ್ ಮಾಕ್ರ್ಸ್ ರಸ್ತೆಯಲ್ಲಿರುವ ‘ಲೇಸ್’ ಎಂಬ ಹೆಸರಿನ ಬಾರ್ & ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ವಿವಿಧ ರಾಜ್ಯಗಳ 27 ಮಹಿಳೆಯರನ್ನು ರಕ್ಷಿಸಿ, ನಬಿಲ್ ಹಾಗೂ ಆನಂದ ಬಂಧಿಸಲಾಗಿದೆ.

     ಮಾಲೀಕರಾದ ನಹೀಮ್, ಅಬ್ದುಲ್ ಹ್ಯಾರೀಸ್, ಪರಮಾನಂದ ಅಲಿಯಾಸ್ ಆನಂದ ಹಾಗೂ ಬ್ಯಾಂಡ್ ಲೀಡರ್ ರಮೇಶ್ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಶೋಧ ನಡೆಸಲಾಗಿದೆ ನಗದು ರೂ, 5,92,800/-, 1 ಮ್ಯೂಸಿಕ್ ಸಿಸ್ಟಮ್, 2 ಸ್ವೀಕರ್, 1, ಡಿವಿಅರ್, ಹಾರ್ಡ್ ಡಿಸ್ಕ್ ಹಾಗೂ ಒಂದು ಹಣ ಎಣಿಸುವ ಯಂತ್ರ ವನ್ನು ವಶಪಡಿಸಿಕೊಳ್ಳಲಾಗಿದೆ.

      ಇಂದಿರಾನಗರ ವೇಪರ್ಸ್ ಎಂಬ ಹೆಸರಿನ ಡ್ಯಾನ್ಸ್ ಬಾರ್‍ನ ಮೇಲೆ ದಾಳಿ ನಡೆಸಿ ಮ್ಯಾನೇಜರ್‍ಗಳಾದ ನವೀನ್ ಕುಮಾರ್,ದಿಲೀಪ್ ಸಾಹು ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜಯ್ ಸೇರಿಮೂವರನ್ನು ಬಂಧಿಸಲಾಗಿದೆ ಬಾರ್‍ನ ಮಾಲೀಕ ಅಕ್ಷತ್ ಪ್ರಸಾದ್ ತಲೆಮರೆಸಿಕೊಂಡಿದ್ದು ಸಿಡಿ ಪ್ಲೇಯರ್, ಒಂದು ಮಿಕ್ಸ್‍ರ್, ಒಂದು ಸಿ.ಡಿ ಪ್ಲೇಯರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

     ಇದಲ್ಲದೇ’ಲಾಪ್ಟ್ 38′ ಡ್ಯಾನ್ಸ್ ಬಾರ್‍ನ ಮೇಲೆ ದಾಳಿ ನಡೆಸಿ ಮ್ಯಾನೇಜರ್‍ಅಸ್ಮಿತಾ ಶೆಟ್ಟಿ, ಜಯಕುಮಾರ್ & ಪಾಸ್ಕಲ್ ಲೆಪ್ಚ ಹಾಗೂ ಜಾಲ್ ಎಂಬ ಡಿಜೆ ಸೇರಿ ನಾಲ್ವರನ್ನು ಬಂಧಿಸಿ ಸ್ಪೀಕರ್ ಬಾಕ್ಸ್, ಒಂದು ಮಿಕ್ಸರ್ ಸಿಸ್ಟಮ್ ಹಾಗೂ ಒಂದು ಪೆನ್ ಡ್ರೈವ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

     ಕಾರ್ಯಾಚರಣೆಯನ್ನು ಪ್ರಶಂಸಿರುವ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಅವರು ನಗರದಲ್ಲಿರುವ ಕಾನೂನು ಬಾಹಿರ ಕೇಂದ್ರಗಳ ಮೇಲೆ ಪೊಲೀಸ್ ದಾಳಿಯು ನಿರಂತರವಾಗಿದ್ದು, ಇವುಗಳನ್ನು ನಡೆಸುವ ಆಸಾಮಿಗಳ ವಿರುದ್ದವೂ ಸಹ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ