ಸಂತೇಬೆನ್ನೂರು
ಜಾಮಿಯ ಶಾದಿಮಹಾಲ್‍ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರೀಷತ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರೀಷತ್ ಸಹಯೋಗದಲ್ಲಿ ಡಾ|| ಸರ್ವಪಲ್ಲಿ ರಾಧಕೃಷ್ಣನ್‍ರವರ ಸ್ಮರಣಾರ್ಥವಾಗಿ ಜಿಲ್ಲಾ ಪ್ರಶಸ್ತಿ ವಿಜೇತ ತಾಲ್ಲೂಕು ಶಿಕ್ಷಕರಿಗೆ ಮತ್ತು ಸಂತೇಬೆನ್ನೂರು ಕ್ಲಸ್ಟರ್-1 ಮತ್ತು ಕ್ಲಸ್ಟರ್-2ರ ಎಲ್ಲಾ ಶಿಕ್ಷಕರಿಗೆ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದ ಚನ್ನಗಿರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಮತಿ ಮಂಜುಳರವರು ಪ್ರಶಸ್ತಿಗಳು, ಪ್ರಶಂಸೆಗಳು ಒಂದು ರೀತಿಯಲ್ಲಿ ಶಿಕ್ಷರಿಕೆ ಜವಬ್ದಾರಿ ಹೆಚ್ಚಿಸುವ ಕಾರ್ಯನಿರ್ವಹಿಸುತ್ತವೆ. ಆದರೆ ಅದು ಮಾನದಂಡವಲ್ಲ.
ಕಲಿಸಿದ ವಿದ್ಯಾರ್ಥಿ ವಿದ್ಯೆ ಪಡೆದು ತನ್ನ ಜೀವನ ರೂಪಿಸಿಕೊಂಡು ಶಿಕ್ಷಕರಿಗೆ ನೆನಸಿ ಗೌರವ ಕೊಡುವುದು ನಿಜವಾದ ಪ್ರಶಸ್ತಿ ಮತ್ತು ಪ್ರಶಂಸೆ. ಶಿಕ್ಷಕರು ಸಹ ಈಗಿನ ನವ್ಯಶಿಕ್ಷಣವನ್ನು ಅಬ್ಯಾಸಿಸುತ್ತಾ ವಿದ್ಯಾರ್ಥಿಗಳಿಗೆ ಭೋದನೆಮಾಡುವಲ್ಲಿ ಪ್ರಭಲರಾಗಬೇಕು ಎಂದು ಕರೆನೀಡಿದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಜಂಟಿ ನಿರ್ದೇಶಕರಾದ ಶ್ರೀ ವೆಂಕಟಾಶಿವರಡ್ಡಿಯವರು ಶಿಕ್ಷಣದ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣವೇ ಎಲ್ಲಾ ಶಿಕ್ಷಣದ ಅಡಿಪಾಯವಾಗಿದ್ದು ಕಾಲೇಜ್ ಮತ್ತು ವಿಶ್ವವಿದ್ಯಾನಿಲಯದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ನಾವು ರೂಪಿಸಲು ಸಹಕಾರಿಯಾಗುತ್ತದೆ.
ಆ ಕೆಲಸವನ್ನು ಪ್ರಾರಂಭಿಕ ಹಂತದಲ್ಲಿ ನಿವೇ ನಿರ್ವಹಿಸಿ ಯಶಸ್ವಿ ವಿದ್ಯಾರ್ಥಿಗಳನ್ನು ನಮ್ಮಗೊಪ್ಪಿಸುತ್ತಿರಿ. ಈಗಿನ ನೂತನ ಶಿಕ್ಷಣ ನೀತಿಯನ್ನು ಸರಿಯಾಗಿ ಅಭ್ಯಸಿಸಿ ವಿದ್ಯಾರ್ಥಿಗಳನ್ನು ಮೇಲ್ಮಟ್ಟಕ್ಕೆ ತರುವ ಸಂಪೂರ್ಣ ಜವಾಬ್ದಾರಿ ನಿಮ್ಮದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಆಯೋಜಕರಾದ ಕೆ.ಸಿರಾಜ್ ಅಹಮ್ಮದ್, ದಾವಣಗೆರೆಯ ವಿ.ಪಿ.ಕೃಷ್ಣಮೂರ್ತಿ, ಧರ್ಮಸ್ಥಳ ಸಂಸ್ಥೆಯ ಶ್ರೀ ನಾಗೇಶ್, ಜಿಲ್ಲಾ ಪ್ರಶಸ್ತಿ ವಿಜೇತರಾದ ಶ್ರೀನಿವಾಸ್, ಶ್ರೀ ದೇವ್ಲಾನಾಯ್ಕ್, ಶುಯೇಬ್ ಮಾತನಾಡಿದರು. ಸಿ.ಆರ್.ಪಿ. ಜಗದೀಶ್ ಮತ್ತು ತಿಮ್ಮೇಶ್ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕ ಎಂ.ಬಿ.ನಾಗರಾಜ್ ಕಾರ್ಯಕ್ರಮದ ನಿರೂಪಣೆ, ಸ್ವಾಗತ ತಿಮ್ಮೇಶ್, ಪ್ರಾರ್ಥನೆ ತೇಜೋವತಿ, ವಂದನಾರ್ಪಣೆ ಹೆಚ್.ಎಸ್.ಕಲ್ಲೇಶ್ ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
