ಸರ್ಕಾರದ ಟ್ರಬಲ್ ಶೂಟರ್ ನಾನೇ.. : ಸಿದ್ದು

ಮೈಸೂರು:

      ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ನಾನೇ. ಅದಕ್ಕೆ ನನ್ನನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರೋದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ,” ಸಮ್ಮಿಶ್ರ ಸರಕಾರದಲ್ಲಿ ಸಮಸ್ಯೆ ಬಂದಾಗ ಅದನ್ನು ಬಗೆಹರಿಸುವುದು ಸಮನ್ವಯ ಸಮಿತಿಯ ಜವಾಬ್ದಾರಿಯಾಗಿದೆ. ಸರಕಾರಕ್ಕೆ ಎದುರಾಗುವ ಸಮಸ್ಯೆಗಳನ್ನು ಬಗೆ ಹರಿಸುವುದಕ್ಕಾಗಿ ನನ್ನನ್ನು ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ನಾನೇ ಟ್ರಬಲ್ ಶೂಟರ್ “ಎಂದು ತಿಳಿಸಿದ್ದಾರೆ. 

       ಸರ್ಕಾರ ಸುಭದ್ರವಾಗಿದ್ದು , 5 ವರ್ಷ ಪೂರೈಸುತ್ತದೆ.ಯಾವೊಬ್ಬ ಶಾಸಕರೂ ಸರ್ಕಾರ ಅಸ್ಥಿರಕ್ಕೆ ಕೈ ಹಾಕಿಲ್ಲ. ಸಾಲ ಮನ್ನಾ ಮೊದಲಾದ ಕೊಡುಗೆಗಳ ಕುರಿತು ಜನರಿಗೆ ಸರ್ಕಾರದ ಕುರಿತು ಒಳ್ಳೆಯ ಭಾವನೆ ಇದೆ.ಸರ್ಕಾರ ಅಸ್ತಿರಗೊಳಿಸುವ ಪ್ರಯತ್ನ ಮಾಧ್ಯಮಗಳ ಸೃಷ್ಟಿ. ಸಮನ್ವಯ ಸಮಿತಿಯ ಸಭೆಯನ್ನು ಅಗತ್ಯ ಬಿದ್ದಾಗ ಮಾತ್ರ ಕರೆಯುತ್ತೇವೆ, ಸುಮ್ಮನೆ ಕರೆಯುವುದಿಲ್ಲ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link