ಹರಪನಹಳ್ಳಿ
ತಾಲೂಕಿನ ಅರಸಿಕೆರೆ ಐತಿಹಾಸಿಕ ಕೆರೆ ಅಂಗಳದಲ್ಲಿ ಬೆಳೆದಿದ್ದ ವಿವಿಧ ಬೆಳೆ ಕಠಾವಿಗೂ ಮುನ್ನವೇ ಕುರಿಗಾಯಿಗಳು ಮೇಯಿಸಿಕೊಂಡಿದ್ದಾರೆ.
ಮೆಕ್ಕೆಜೋಳ, ಸೂರ್ಯಕಾಂತಿ, ಊಟದ ಜೋಳ ಸೇರಿ ವಿವಿಧ ಬೆಳೆ ಬಿತ್ತನೆ ಮಾಡಿದ್ದರು. ಕುರಿಗಾಯಿ ಮತ್ತು ದನಗಾಯಿಗಳು ತಮ್ಮ ದನಕರು, ಮೇಕೆ, ಕುರಿ ಬಿಟ್ಟು ತಿನ್ನಿಸಿದ್ದರೆ, ಕೆಲವರು ಬೆಳೆ ಸಮೇತ ಕಿತ್ತು ಪರಾರಿಯಾಗಿದ್ದಾರೆ.
ಮಳೆಯ ಕೊರತೆ ನಡುವೆಯು ಬೆಳೆಗಳು ಕಠಾವಿಗೆ ಬಂದಿದ್ದವು, ಇನ್ನೇನು ತೆನೆ ಕಿತ್ತು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಮಕ್ಕೆಜೋಳದ ಬೆಳೆಗಳ ತೆನೆ, ಮೇವು ಸಮೇತ ಚೆಲ್ಲಾಪಿಲ್ಲಿಯಾಗಿದ್ದವು. ಬಿತ್ತನೆ ಮಾಡಿದ್ದ ರೈತರು ತಾವು ಗಡಿಗುರುತು ಮಾಡಿ ಬಿತ್ತಿ ಬೆಳೆದಿದ್ದ ಸ್ಥಳ ವೀಕ್ಷಣೆಗೆ ತೆರಳಿದಾಗ ಗಿಡ ಸಮೇತ, ತೆನೆ ಕಾಣದಿರುವುದು ಅಚ್ಚರಿ ಮೂಡಿಸಿದೆ.
ಗ್ರಾಮದಲ್ಲಿ ಮೇವಿಗಾಗಿ ಬಹುದೂರ ತೆರಳಬೇಕು, ಆಗಾಗಿ ಕೆರೆಯ ಅಂಗಳ ಸರಕಾರಿ ಜಾಗವಾಗಿದ್ದರಿಂದ ಕುರಿಗಾಯಿಗಳು ಮೇಯಿಸಿರಬೇಕು ಎಂದು ತಿಳಿದುಬಂದಿದೆ. ಮುಂಗಡವಾಗಿ ಊಟದ ಜೋಳ ಬಿತ್ತನೆ ಮಾಡಿದ್ದ ಬೆರಳೆಣಿಕೆಯ ರೈತರು ತೆನೆ ಕೊಯ್ದು ರಾಶಿ ಮಾಡಿಕೊಂಡಿದ್ದರೇ, ಬೆಳೆ ಕಳೆದುಕೊಂಡ ರೈತರು ಕೈಸುಟ್ಟು ಕೊಳ್ಳುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ