ಕಲಾಮಂದಿರ ಸ್ಥಾಪನೆಗೆ ಸಹಕರಿಸಿ : ದಿವುಶಂಕರ್

ಹಿರಿಯೂರು:

       ನಗರದಲ್ಲಿ ಚಿತ್ರನಟ ದಿವಂಗತ ಶಂಕರ್‍ನಾಗ್‍ರವರ ಹೆಸರಿನಲ್ಲಿ ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಕಲಾಮಂದಿರ ನಿರ್ಮಿಸುವ ಉದ್ದೇಶವಿದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜೂನಿಯರ್ ಶಂಕರ್‍ನಾಗ್ ಖ್ಯಾತಿಯ ಹೆಚ್.ಸಿ.ದಿವುಶಂಕರ್ ಹೇಳಿದರು.
ಶ್ರೀಶೈಲ ವೃತ್ತದಲ್ಲಿ ಶಂಕರ್‍ನಾಗ್ ಅಭಿಮಾನಿಗಳ ಕಲಾ ವೇದಿಕೆ, ಅಮೃತ ಬ್ಯೂಟಿ ಪಾರ್ಲರ್, ಗುರುಶಂಕರ್‍ನಾಗ್ ಡಿಜಿಟಲ್ ಫೋಟೊ ಸ್ಟುಡಿಯೋ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶಂಕರ್‍ನಾಗ್‍ರವರ ಚಿರಸ್ಮರಣೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,

       ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಹೆಚ್.ರಾಜಶೇಖರ್‍ರವರು ಮಾತನಾಡಿ, ಶಂಕರ್‍ನಾಗ್ ಎಸ್.ಪಿ.ಸಾಂಗ್ಲಿಯಾನ ಇವರ ಪಾತ್ರಗಳಲ್ಲಿ ಹಾಡುಗಾರಿಕೆ ಹಾಗೂ ಅಭಿನಯ ಮಾಡಿ ಸಾರ್ವಜನಿಕರನ್ನು ರಂಜಿಸಿದರು ಎಂದರಲ್ಲದೆ ಕಲೆ ಎಂಬುದು ಗುಡಿಸಿಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತದೆ ಎಂದರು.

        ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಗ್ರಂಥಾಲಯದ ಗ್ರಂಥಪಾಲಕರಾದ ಪಿ.ಆರ್.ತಿಪ್ಪೇಸ್ವಾಮಿಯವರು ವಹಿಸಿದ್ದರು. ಚಿತ್ರದುರ್ಗ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಪರುಶುರಾಮ್ ಗೊರಪ್ಪನವರು ಮತ್ತಿತರರು ಮಾತನಾಡಿದರು.

       ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಟಿ.ಶಿವಮೂರ್ತಿ, ಆನಂದ್, ಪಗಡಲಬಂಡೆ ನಾಗೇಂದ್ರಪ್ಪ, ಗಾಯಕಿ ಲಕ್ಷ್ಮಿ, ಶಿವಾನಂದ್ ಕೆಂಚೇಗೌಡ ಮತ್ತಿತರರು ಭಾಗವಹಿಸಿದ್ದರು. ವೀಣಾಮೃತ ಪ್ರಾರ್ಥಿಸಿದರು ಶಿವಮೂರ್ತಿ ವಂದಿಸಿದರು. ಚಿತ್ರನಟ ಶಂಕರ್‍ನಾಗ್‍ರವರ ಚಿರಸ್ಮರಣೆ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಲು ಹಣ್ಣು ವಿತರಿಸಲಾಯಿತು. ಡಾ.ನಾಗರಾಜ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap