ಮದುವೆ ಮನೆಯಲ್ಲಿ ಕವಿಗೋಷ್ಠಿ ಸಾಹಿತ್ಯ ಪ್ರೇಮಿ ಹುಸೇನ್‍ಫೀರ್

ಹಿರಿಯೂರು:

     ಮದುವೆ ಮನಸ್ಸು ಮನಸ್ಸುಗಳ ಬೆಸುಗೆಯ ಸ್ವಚ್ಛಂದದ ಜೀವನ ಈ ಮದುವೆ ಮನೆಯಲ್ಲಿ ಕವಿಗೋಷ್ಠಿ ಆಯೋಜಿಸಿರುವುದು ನಿಜಕ್ಕೂ ಒಂದು ವಿಶೇಷವಾಗಿದೆ. ಸಾಹಿತ್ಯದ ಬಗ್ಗೆ ಒಲವು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮದುವೆ ಮನೆಯಲ್ಲಿ ಆರ್ಕೇಷ್ಟ್ರ ಕಾರ್ಯಕ್ರಮ ಆಯೋಜಿಸುತ್ತಾರೆ. ಅಂತದ್ದರಲ್ಲಿ ಹುಸೇನ್‍ಫೀರ್‍ರವರು ತಮ್ಮ ಮಗನ ಮದುವೆಯಲ್ಲಿ ಕವಿಗೋಷ್ಠಿ ನಡೆಸುತ್ತಿರುವುದು ಒಬ್ಬ ಸಾಹಿತ್ಯ ಪ್ರೇಮಿಗಿರುವ ಆಸಕ್ತಿ ಎಂಬುದಾಗಿ ಕನ್ನಡಸಾಹಿತ್ಯಪರಿಷತ್ ಜಿಲ್ಲಾಧ್ಯಕ್ಷರಾದ ಡಾ||ದೊಡ್ಡಮಲ್ಲಯ್ಯನವರು ಹೇಳಿದರು.

     ನಗರದ ಶ್ರೀಮತಿ ತುಳಸಿ ಬಿ.ನಾರಾಯಣರಾವ್ ಕಲ್ಯಾಣ ಮಂಟಪದಲ್ಲಿ ಶ್ರೀಮತಿ ಷಹಜಹಾನ್ ಮತ್ತು ಶ್ರೀ ಹುಸೇನ್‍ಫೀರ್‍ರವರ ಪುತ್ರ ಫಕೃದ್ದೀನ್ ಹೆಚ್.ಹಾಗೂ ಶಮೀರಾ ಇವರ ಮದುವೆ (ನಿಖಾಃ) ಮಹೋತ್ಸವದ ಪ್ರಯುಕ್ತ ಕವಿಗೋಷ್ಠಿ ನಡೆಯಿತು. ಈ ಸಮಾರಂಭವನ್ನು ಜಾನಪದ ಶೈಲಿಯ ಮಣ್ಣಿನ ಮಡಿಕೆಯಲ್ಲಿ ಮೊಸರು ಹಾಕಿ ಕಡಗೋಲಿನಿಂದ ಮೊಸರು ಕಡೆಯುವುದರ ಮೂಲಕ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಈ ಸಮಾರಂಭದಲ್ಲಿ ಸಾಹಿತಿ ಚಂದ್ರಶೇಖರ್ ತಾಳ್ಯರವರು ಮಾತನಾಡುತ್ತಾ ಮದುವೆ ಸಮಾರಂಭದಲ್ಲಿ ಕವಿಗೋಷ್ಠಿ ಮಾಡುವುದು ತುಂಬಾ ಕಷ್ಟಕರ ಅಂತದ್ದರಲ್ಲಿ ಹುಸೇನ್‍ಫೀರ್‍ರವರು ಕೋಗಿಲೆಗಳು ಕೂಗಿ ಹಾಡಿದರೆ ಕವಿ ಕೋಗಿಲೆಗಳು ಬರೆದು ಹಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಸಾಹಿತ್ಯ ಚಿಂತನೆ ಉತ್ತಮ ಬದುಕು, ಸಂಸ್ಕತಿ, ಸಂಸ್ಕಾರವನ್ನು ರೂಪಿಸುತ್ತದೆ ಎಂದರು.

   ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕಲೀಂ ಭಾಷ ಮಾತನಾಡುತ್ತಾ ವಧುವರರು ಉತ್ತಮ ಜೀವನ ನಿರ್ವಹಣೆ ಜವಾಬ್ದಾರಿಯುತ ಭವಿಷ್ಯದ ಬದುಕು ರೂಪಿಸಿಕೊಳ್ಳಬೇಕು ಎಂದರು.

     ಈ ಸಮಾರಂಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಆರ್.ಶಂಕರ್ ಜಿಲ್ಲಾ ಗೌರವ ಕಾರ್ಯದರ್ಶಿ ಇಸೂಫ್ ತಾ||ಗೌರವ ಕಾರ್ಯದರ್ಶಿ ಕೆ.ಎಂ.ಜಗನ್ನಾಥ್, ಕವಿಗಳಾದ ಷರೀಫಾ, ಬಿ.ಗಡಾರಿ ಕೃಷ್ಣಪ್ಪ, ಹರ್ತಿಕೋಟೆ ಮಹಾಸ್ವಾಮಿ, ಬಬ್ಬೂರು ತಿಪ್ಪೀರನಾಯಕ, ಮಹಮದ್ ಸೈಪುದ್ದೀನ್, ಗಿರೀಶ್, ಅಶೋಕ್, ನಿರ್ಮಲ, ರುದ್ರಸ್ವಾಮಿ, ರಾಜುಸೋಲೇನಹಳ್ಳಿ, ಕನಕಪ್ರೀತೀಷ್, ನಿರಂಜನಮೂರ್ತಿ, ಜಿಲ್ಲೆಯ 25 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.ಎಲ್ಲಾ ಕವಿಗಳಿಗೆ ನೆನಪಿನ ಕಾಣಿಕೆ ಪುಸ್ತಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap