ಬೆಂಗಳೂರು
ನಗರದ ಹೊರವಲಯದ ಬಿಡದಿಯ ರಾಮನಹಳ್ಳಿ ಬಳಿ ಮಂಗಳವಾರಬೆಳಿಗ್ಗೆ ವಿದ್ಯುತ್ ಕಂಬಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಉರುಳಿಬಿದ್ದು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿ ದೊಡ್ಡ ಅನಾಹುತ ತಪ್ಪಿದೆ.
ಮೈಸೂರು ಕಡೆಗೆ ಹೋಗುತ್ತಿದ್ದ ಬಸ್ ಸ್ಟೇರಿಂಗ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.ಅಪಘಾತದಿಂದ ವಿದ್ಯುತ್ ತಂತಿ ಬಸ್ಗೆ ಸುರುಳಿಯಂತೆ ಸುತ್ತಿಕೊಂಡಿದ್ದರೂ ವಿದ್ಯುತ್ ಪ್ರವಹಿಸದೆ, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ದಾವಿಸಿರುವ ಬಿಡದಿ ಪೊಲೀಸರು, ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೇರೊಂದು ಬಸ್ನ ವ್ಯವಸ್ಥೆ ಮಾಡಿದ್ದಾರೆ.
ಯುವಕ ಸಾವು ಕೆಂಗೇರಿಯ ನೈಸ್ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ವೇಗವಾಗಿ ಹೋಗುತ್ತಿದ್ದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ.
ಮೃತ ಸವಾರನನ್ನು ಕೃಷ್ಣ (36) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯರಾತ್ರಿ 11.50ರ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಕೆಂಗೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ಯಾಟ್ ಬಿಚ್ಚುತ್ತೇನೆ ಎಂದ ಚಾಲಕ ಸಿಕ್ಕಿಬಿದ್ದ ಗರುಡಾಮಾಲ್ ಬಳಿಯ ನಡುರಸ್ತೆಯಲ್ಲಿ ಪ್ಯಾಂಟ್ ಬಿಚ್ಚುತ್ತೇನೆ ಎಂದು ಹೇಳಿ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕನನ್ನು ಅಶೋಕ್ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂತ್ರಸ್ಥ ಮಹಿಳೆಯು ಫೇಸ್ ಬುಕ್ ಖಾತೆಯಲ್ಲಿ ಕಿರುಕುಳದ ವಿಡಿಯೋ ಟ್ಯಾಗ್ ಮಾಡಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದನ್ನು ಆಧರಿಸಿ ಕೃತ್ಯವೆಸಗಿದ ಆಟೋ ಚಾಲಕ ಸಯ್ಯದ್ ಮೊಹೀಬ್ ಬಂಧಿಸಲಾಗಿದೆ.
ಆರೋಪಿಯು ಕಳೆದ ಭಾನುವಾರ ಸಂಜೆ 5ರ ವೇಳೆ ಗರುಡಾ ಮಾಲ್ ಬಳಿ ಕಾಫಿ ಕುಡಿಯುತ್ತಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಮಹಿಳೆಗೆ ಪ್ಯಾಂಟ್ ಬಿಚ್ಚುತ್ತೇನೆ ಎಂದು ಹೇಳಿ ಕಿರುಕುಳ ನೀಡಿದ್ದ.ಈ ಸಂಬಂಧ ಅಶೋಕ್ ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಆಟೋ ನೊಂದಣಿ ಸಂಖ್ಯೆಯನ್ನು ಆಧರಿಸಿ ಆರೋಪಿಯನ್ನು ಬಂಧಿಸಿ, ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ