ಬೆಂಗಳೂರು
ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ)ಟಿ.ಶ್ರೀನಿವಾಸಲು ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಕಳವು ಮಾಡಿದ್ದ ಆಂದ್ರ ಮೂಲದ ಇಬ್ಬರು ಕುಖ್ಯಾತ ಮನೆಗಳ್ಳರು ಸದಾಶಿವನಗರ ಪೊಲೀಸರ ಅತಿಥಿಯಾಗಿದ್ದಾರೆ.
ನಗರದಲ್ಲಿ ಕಳವು ಮಾಡಿ ಆಂಧ್ರಕ್ಕೆ ಪರಾರಿಯಾಗುತ್ತಿದ್ದ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಸತೀಶ್ ರೆಡ್ಡಿ(35)ಹಾಗೂ ತೇಜಸ್(28)ಬಂಧಿಸಿ ಕಳವು ಮಾಡಿದ್ದ ಶ್ರೀನಿವಾಸಲು ಅವರ ಅಳಿಯನ ಸುಮಾರು 30 ಲಕ್ಷ ಮೌಲ್ಯದ ಹುಂಡೈ ಟೆಕ್ಸಾನ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ
ಬಂಧಿತ ಆರೋಪಿಗಳು ಇಂದಿರಾನಗರದ ಶ್ರೀನಿವಾಸಲು ಅವರ ಮನೆಗೆ ಮನೆಕಳ್ಳತನ ಮಾಡಲು ಬಂದಿದ್ದು ಕಳ್ಳತಕ್ಕೆ ವಿಫಲಯತ್ನ ನಡೆಸಿ ಹೊರಗಡೆ ನಿಲ್ಲಿಸಿದ್ದ ಶ್ರೀನಿವಾಸಲು ಅವರ ಅಳಿಯ ಕೃಷ್ಣಮೂರ್ತಿ ಅವರ ಕಾರು ಕಳವು ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿತ್ತು.ಸದಾಶಿನಗರದಲ್ಲಿ ಆರೋಪಿಗಳು ಕಾರು ನಿಲ್ಲಿಸಿ ಮನೆಗಳವಿಗೆ ಹೊಂಚು ಹಾಕುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಸದಾಶಿವನಗರ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳು ವಿಚಾರಣೆಯಲ್ಲಿ ಆಂಧ್ರದ ಹೈದರಾಬಾದ್ ತೆಲಂಗಾಣಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಕಳವು ಪ್ರಕರಣಗಳಿಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾರೆ ನಗರಕ್ಕೆ ಮನೆಕಳವು ಮಾಡಲು ಬಂದಿದ್ದ ಆರೋಪಿಗಳು ಕಳವು ಮಾಡಿದ ನಂತರ ಆಂಧ್ರಕ್ಕೆ ಪರಾರಿಯಾಗುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಮಾದಕವಸ್ತು ಮಾರಾಟ ಇಬ್ಬರ ಸೆರೆ ಹೆಚ್ಎಸ್ಆರ್ ಲೇಔಟ್ನ ಪರಂಗಿಪಾಳ್ಯದ ಬಳಿ ಮಾದಕ ವಸ್ತು, ಎಂಡಿಎಂಎ, ಗಾಂಜಾ ಹಾಗೂ ಮಾದಕ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ 4 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ವಾಲಪಾಡ್ ಮೂಲದ ಪರಂಗಿಪಾಳ್ಯದ ಬಾಲು ಅಲಿಯಾಸ್ ಬಾಲು ಗೋಪಾಲ (27), ಹರಳೂರಿನ ಸನೋಜ್ (21)ನನ್ನು ಬಂಧಿಸಿ 4 ಗ್ರಾಂ ಎಂಡಿಎಂಎ, 54 ಮಾದಕ ಮಾತ್ರೆಗಳು, 5 ಕೆಜಿ ಗಾಂಜಾ, ಮೂರು ಮೊಬೈಲ್, 1 ದ್ವಿಚಕ್ರ ವಾಹನ ಸೇರಿ 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಆರೋಪಿಗಳು ಎಂಡಿಎಂಎ, ಮಾದಕ ಮಾತ್ರೆಗಳು ಹಾಗೂ ಗಾಂಜಾವನ್ನು ಬೇರೆಡೆಯಿಂದ ಖರೀದಿಸಿಕೊಂಡು ಬಂದು ಚಿಕ್ಕ ಪ್ಯಾಕೆಟ್ಗಳನ್ನಾಗಿ ಮಾಡಿ, ಪರಿಚಿತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಪರಂಗಿಪಾಳ್ಯದ 24ನೇ ಮುಖ್ಯರಸ್ತೆಯ ಫುಟ್ಪಾತ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ನಡೆಸಿ, ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








