ಮಾಜಿ ಮೇಯರ್ ಹಂತಕನ್ನನ್ನು ನ್ಯಾಯಲಯದಲ್ಲಿ ಹಾಜರುಪಡಿಸಲಾಯಿತು

ತುಮಕೂರು:

    ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ಶರಣಾಗತರಾಗಿದ್ದ ಸುಜಯ್ ಭಾರ್ಗವ್ ಹಾಗೂ ರಘು ಅವರನ್ನು ನಿನ್ನೆ ಸಂಜೆ ತುಮಕೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

    ಸಂಜೆ ಸುಮಾರು 5 ಗಂಟೆ ಸಮಯಕ್ಕೆ ನ್ಯಾಯಾಲಯದ ಆವರಣಕ್ಕೆ ಪೊಲೀಸರು ಇಬ್ಬರನ್ನು ವಾಹನದಲ್ಲಿ ಕರೆತಂದರು. ಮೂರನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರು ರಜೆ ಇದ್ದ ಕಾರಣ ಇಬ್ಬರನ್ನು ಆರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

   ಈ ಸಂದರ್ಭದಲ್ಲಿ ಆರೋಪಿತರ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರು. ಅಭಿಯೋಜಕರು ನ್ಯಾಯಾಧೀಶರಿಗೆ ಪೊಲೀಸರ ಪರವಾಗಿ ನಿವೇದನೆ ಸಲ್ಲಿಸಿ ಪೊಲೀಸ್ ಕಸ್ಟಡಿಗೆ ಕೋರಿದರು. ಅದರಂತೆ ನ್ಯಾಯಾಧೀಶರಾದ ಎಚ್.ಎಸ್.ಮಲ್ಲಿಕಾರ್ಜುನಸ್ವಾಮಿ ಅವರು ಇಬ್ಬರು ಆರೋಪಿತರನ್ನು ಅಕ್ಟೋಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

    ಮಂಗಳವಾರ ಸಂಜೆ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ಶರಣಾಗುವ ಸಂದರ್ಭದಲ್ಲಿ ಶಂಕಿತ ಆರೋಪಿ ಸುಜಯ್ ಭಾರ್ಗವ್ ಅಲ್ಲಿನ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ಎನ್‍ಕೌಂಟರ್ ಮಾಡುವ ಭೀತಿಯಿಂದ ನಾನು ಇಲ್ಲಿಗೆ ಬಂದು ಶರಣಾಗಿದ್ದೇನೆ.

    ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ತಪ್ಪಿತಸ್ಥರು ಯಾರು ಎಂಬುದನ್ನು ವಿಚಾರಣೆಯಲ್ಲಿ ಗೊತ್ತಾಗಲಿದೆ ಎಂದು ಹೇಳಿಕೊಂಡಿರುವ ಮಾತುಗಳು ಈಗ ಸಾರ್ವಜನಿಕ ವಲಯದಲ್ಲಿ ಜಿಜ್ಞಾಸೆ ಉಂಟು ಮಾಡಿದೆ. ಸುಜಯ್ ಭಾರ್ಗವ್‍ಗೆ ನಿಜವಾಗಿಯೂ ಎನ್‍ಕೌಂಟರ್ ಭೀತಿ ಇತ್ತೇ? ಅಲ್ಲಿನ ಪೊಲೀಸ್ ಠಾಣೆಗೆ ತೆರಳಿ ಶರಣಾದುದಾದ್ದಾರೂ ಏಕೆ? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link