ಅಲಸಂದೆ ಬೀಜದಿಂದ ಸಿಗುವ ಬರೋಬ್ಬರಿ 10 ಆರೋಗ್ಯ ಲಾಭಗಳು

       ಧಾನ್ಯಗಳು ಹಾಗೂ ಕಾಳುಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಇದ್ದು, ದೇಹಕ್ಕೆ ತುಂಬಾ ಲಾಭಕಾರಿ. ಇದು ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇಂತಹ ಒಂದು ಧಾನ್ಯವೇ ಅಲಸಂದೆ ಕಾಳು(ಬೀಜ). ಇದನ್ನು ಇಂಗ್ಲಿಷ್ ನಲ್ಲಿ ಬ್ಲ್ಯಾಕ್ ಐಡ್ ಪೀಸ್(ಕಪ್ಪು ಕಣ್ಣಿನ ಬಟಾಣಿ ಎಂದು ಕರೆಯಲಾಗುತ್ತದೆ.Related image

      ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುವ ಕಾರಣ ಸಲಾಡ್, ಸೂಪ್ ಮತ್ತು ಇತರ ಖಾದ್ಯಗಳಲ್ಲಿ ಬಳಸಬಹುದು. ಇದನ್ನು ಬೆಳ್ತಿಗೆ ಅನ್ನದೊಂದಿಗೆ ಸಾರು ಮಾಡಿಕೊಂಡು ತಿಂದರೆ ಅದರ ರುಚಿಯೇ ಅದ್ಭುತವಾಗಿರುವುದು. ಅಲಸಂದೆ ಕಾಳಿನಲ್ಲಿ ಇರುವಂತಹ ಪೋಷಕಾಂಶಗಳು ಕಡಿಮೆ ಕ್ಯಾಲರಿ ಇದೆ. ½ ಕಪ್ ಅಥವಾ 83 ಗ್ರಾಂ ಅಲಸಂದೆ ಕಾಳಿನಲ್ಲಿ ಇರುವಂತಹ ಪೋಷಕಾಂಶಗಳು. ಕಾರ್ಬ್ಸ್ 20.30 ಗ್ರಾಂ. ನಾರಿನಾಂಶ 7.5 ಗ್ರಾಂ ವಿಟಮಿನ್ 2.8 ಮಿ.ಗ್ರಾಂ. ಕಬ್ಬಿನಾಂಶ 1.81 ಮಿ.ಗ್ರಾಂ. ಕ್ಯಾಲ್ಸಿಯಂ 23 ಮಿ.ಗ್ರಾಂ. ಮೆಗ್ನಿಶಿಯಂ 60 ಮಿ.ಗ್ರಾಂ. ಸೋಡಿಯಂ 1 ಮಿ.ಗ್ರಾಂ. ಫೋಸ್ಪರಸ್ 120 ಮಿ.ಗ್ರಾಂ. ಪೊಟಾಶಿಯಂ 305 ಮಿ.ಗ್ರಾ. ಫಾಲಟೆ 128 ಮಿ.ಸಿ.ಗ್ರಾಂ. ನಿಯಾಸಿನ್ 0.434 ಮಿ.ಗ್ರಾಂ. ಥೈಮಿನ್ 0.21 ಮಿ.ಗ್ರಾಂ

ಅಲಸಂದೆ ಕಾಳಿನ ಲಾಭಗಳು:

  1. ಹೃದಯ ಆರೋಗ್ಯ ಸುಧಾರಿಸುವುದು ನಿಯಮಿತವಾಗಿ ಪೊಟಾಶಿಯಂ ಸೇವನೆ ಮಾಡುವುದರಿಂದ ಹೃದಯವನ್ನು ಆರೋಗ್ಯವಾಗಿಡಬಹುದು ಮತ್ತು ಹೃದಯಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಲ್ಲ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಬೇಕು. ಕಡಿಮೆ ಕೊಬ್ಬು ಮತ್ತು ಕ್ಯಾಲರಿ ಇರುವಂತಹ ಅಲಸಂದೆ ಬೀಜವು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
  2. ಚರ್ಮ, ಉಗುರು, ಕೂದಲು ಮತ್ತು ಸ್ನಾಯುಗಳ ಬಲಗೊಳಿಸುವುದು ದೇಹದ ಬೆಳವಣಿಗೆಗೆ ಪ್ರೋಟೀನ್ ಅಗತ್ಯವಾಗಿರುವುದು ಮತ್ತು ಅಲಸಂದೆ ಬೀಜವು ಪ್ರೋಟೀನ್ ನ್ನು ದೇಹಕ್ಕೆ ಒದಗಿಸುವುದು. ಚರ್ಮ, ಉಗುರು, ಕೂದಲು ಮತ್ತು ಸ್ನಾಯುಗಳು ಬಲಗೊಳ್ಳಲು ಪ್ರೋಟೀನ್ ಅಗತ್ಯವಾಗಿ ಬೇಕು ಮತ್ತು ಇದು ಹಾನಿಗೊಳಗಾಗಿರುವ ಕೋಶಗಳನ್ನು ಕೂಡ ಸರಿಪಡಿಸುವುದು.
  3. ಆರೋಗ್ಯ ವೃದ್ಧಿಸುವುದು ಅಲಸಂದೆ ಬೀಜದಲ್ಲಿ ಇರುವಂತಹ ವಿಟಮಿನ್ `ಎ’ ಕಣ್ಣಿನ ಆರೋಗ್ಯ ವೃದ್ಧಿಸುವುದು ಮತ್ತು ಕಣ್ಣೀನ ರೆಟಿನಾ ಭಾಗದಲ್ಲಿ ಇದು ವರ್ಣದ್ರವ್ಯ ಉತ್ಪತ್ತಿ ಮಾಡುವುದು. ಅಲಸಂದೆ ಬೀಜದಲ್ಲಿ ಬಸಲೆ ಮತ್ತು ಬ್ರಾಕೋಲಿಯಲ್ಲಿರುವ ವಿಟಮಿನ್ `ಎ’ ಗಿಂತಲೂ ಅಧಿಕವಾಗಿದೆ. ಇದು ಚರ್ಮದ ಆರೋಗ್ಯ ಕಾಪಾಡುವುದು.Related image
  4. ಜೀರ್ಣಕ್ರಿಯೆ ಸುಧಾರಣೆ ಅಲಸಂದೆ ಬೀಜದಲ್ಲಿ ಇರುವಂತಹ ನಾರಿನಾಂಶವು ತುಂಬಾ ಕಡಿಮೆ ಸಮಯದಲ್ಲಿ ಕರುಳಿನ ಕ್ರಿಯೆಗಳನ್ನು ಸುಧಾರಣೆ ಮಾಡುವುದು. ಸಣ್ಣ ಕರುಳು ಮತ್ತು ದೊಡ್ಡ ಕರುಳಿನಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್ ನ್ನು ಶುದ್ಧೀಕರಿಸುವ ಅಲಸಂದೆ ಬೀಜವು ಹೃದಯಘಾತ, ಪಾರ್ಶ್ವವಾಯು ಮತ್ತು ಎದೆನೋವು ಉಂಟು ಮಾಡುವಂತಹ ಅಪಧಮನಿ ಕಾಠಿಣ್ಯ ಪರಿಸ್ಥಿತಿಯನ್ನು ತಡೆಯುವುದು.
  5. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅಪಾಯ ತಗ್ಗಿಸುವುದು ಫಾಲಟೆ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡುವುದರಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು. ಅಲಸಂದೆ ಬೀಜದಲ್ಲಿ ಇರುವಂತಹ ಫಾಲಟೆ ಅಂಶವು ಕ್ಯಾನ್ಸರ್ ತಡೆಗಟ್ಟಲು ನೆರವಾಗುವುದು. ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಕ್ಯಾನ್ಸರ್ ನ್ನು ದೂರವಿಡಿ.
  6. ಸಕ್ಕರೆ ಮಟ್ಟ ನಿಯಂತ್ರಿಸುವುದು ಅಲಸಂದೆ ಬೀಜದಲ್ಲಿ ಇರುವಂತಹ ನಾರಿನಾಂಶವು ಟೈಪ್ 1 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು. ಇದು ಇನ್ಸುಲಿನ್ ಮತ್ತು ಲಿಪಿಡ್ ಮಟ್ಟವನ್ನು ಸುಧಾರಣೆ ಮಾಡುವುದು. ಟೈಪ್ 2 ಮಧುಮೇಹಿಗಳು ಕೂಡ ಈ ಬೀಜವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ವೈದ್ಯರಿಂದ ಸಲಹೆ ಪಡೆದ ಬಳಿಕ ನೀವು ಹೀಗೆ ಮಾಡಬಹುದು.
  7. ತೂಕ ಕಳೆದುಕೊಳ್ಳಲು ಸಹಕಾರಿ. ಆಹಾರದಲ್ಲಿನ ನಾರಿನಾಂಶವು ಅಲಸಂದೆ ಬೀಜದಲ್ಲಿ ಇರುವುದರಿಂದ ಇದು ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ಅತಿಯಾಗಿ ತಿಂದು ಹೆಚ್ಚಿನ ಕ್ಯಾಲರಿ ಸೇವಿಸದಂತೆ ತಡೆಯುವುದು. ಇದರಿಂದ ಬೊಜ್ಜನ್ನು ದೂರವಿಟ್ಟು, ಶಕ್ತಿ ತುಂಬಿದಂತೆ ಮಾಡುವುದು. ತೂಕ ಇಳಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ ಆಗ ಆಹಾರ ಕ್ರಮದಲ್ಲಿ ಈ ಬೀಜ ಸೇರಿಸಿಕೊಳ್ಳಿ.Related image
  8. ರಕ್ತದೊತ್ತಡ ನಿಯಂತ್ರಣದಲ್ಲಿಡುವುದು ಅಧಿಕ ರಕ್ತದೊತ್ತಡದಿಂದಾಗಿ ಪಾರ್ಶ್ವವಾಯು ಇತ್ಯಾದಿಗಳು ಉಂಟಾಗಬಹುದು. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ಬಯಸಿದರೆ ಆಗ ನೀವು ಅಲಸಂದೆ ಬೀಜವನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದರಲ್ಲಿ ಇರುವ ಉನ್ನತ ಮಟ್ಟದ ಪೊಟಾಶಿಯಂ ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದು.
  9. ರಕ್ತಿಹೀನತೆ ನಿವಾರಿಸುವುದು ಹಿಮೋಗ್ಲೋಬಿನ್ ಕಡಿಮೆಯಿದ್ದರೆ ಆಗ ನೀವು ಕಬ್ಬಿನಾಂಶ ಹೆಚ್ಚಿರುವಂತಹ ಆಹಾರ ಸೇವನೆ ಮಾಡಬೇಕು. ಇದರಲ್ಲಿ ಅಲಸಂದೆ ಬೀಜ ಕೂಡ ಒಂದಾಗಿದೆ. ನಿಯಮಿತವಾಗಿ ಇದರ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿ ಕಬ್ಬಿನಾಂಶವು ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುವುದು.
  10. ಮೂಳೆಗಳ ಆರೋಗ್ಯ ಸುಧಾರಿಸುವುದು ವಯಸ್ಸಾಗುತ್ತಾ ಹೋದಂತೆ ಮೂಳೆಗಳ ಆರೋಗ್ಯವು ಕುಂದುತ್ತಾ ಹೋಗುವುದು. ಇದರಿಂದ ಮೂಳೆ ಮುರಿತದ ಸಮಸ್ಯೆಯು ಕಾಣಿಸುವುದು. ಅಲಸಂದೆ ಬೀಜವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ನಿಮಗೆ ಪ್ರಮುಖ ಖನಿಜಾಂಶಗಳಾಗಿರುವಂತಹ ಕ್ಯಾಲ್ಸಿಯಂ, ಫೋಸ್ಪರಸ್, ಪೊಟಾಶಿಯಂ, ಮೆಗ್ನಿಶಿಯಂ, ಸೋಡಿಯಂ ಇತ್ಯಾದಿ ಲಭ್ಯವಾಗುವುದು. ಇದು ಮೂಳೆ ಸಾಂದ್ರತೆ ಕಡಿಮೆ ಮಾಡುವುದು. ಇಷ್ಟು ಮಾತ್ರವಲ್ಲದೆ ಅಕಾಲಿಕವಾಗಿ ಗೋಚರಿಸುವಂತಹ ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಯುವುದು. ಎಲ್ಲಾ ರೀತಿಯ ಆರೋಗ್ಯ ಲಾಭ ಪಡೆಯುವ ಸಲುವಾಗಿ ನೀವು ಈ ಬೀಜವನ್ನು ಆಹಾರ ಕ್ರಮದಲ್ಲಿ ಇಂದೇ ಸೇರಿಸಿಬಿಡಿ.

Recent Articles

spot_img

Related Stories

Share via
Copy link