ದಾವಣಗೆರೆ :
2017-18ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸೆ.26 ರಂದು 18 ದೈಹಿಕ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರವಾಹನ (ರೆಟ್ರೋಫಿಟ್ಮೆಂಟ್ ಸಹಿತ)ಗಳನ್ನು ಒಂದು ವಾಹನಕ್ಕೆ ರೂ. 67,350/-ರಂತೆ ಶ್ರೀ ಕಲ್ಲೇಶ್ವರ ಮೋಟಾರ್ಸ್, ದಾವಣಗೆರೆ ಇವರಿಂದ ಖರೀದಿಸಿ ವಿತರಿಸಲಾಯಿತು.
ಈ ವಿತರಣಾ ಕಾರ್ಯಕ್ರಮದಲ್ಲಿ ಸಂಸದರಾದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಸ್.ಎ. ರವೀಂದ್ರನಾಥ್, ಸಿ.ಆರ್.ಸಿ. ಕೇಂದ್ರದ ನಿರ್ದೇಶಕರಾದ ಯಾಸಿನ್ ಷರೀಫ್ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ಜಿ.ಎಸ್. ಶಶಿಧರ್ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ