ಮಂಡ್ಯ:

ಕನ್ನಡದ ಮೇರುನಟ ಡಾ.ರಾಜ್ಕುಮಾರ್ ಅವರನ್ನು ಬೆಳೆದವರು ಎಂದು ಕನ್ನಡದ ಹಿರಿಯ ನಟ ಅಂಬರೀಷ್ ತಿಳಿಸಿದರು. ಮಂಡ್ಯದಲ್ಲಿ ಮಾತನಾಡುತ್ತಿದ್ದ ಅವರು, ಹಲ್ಲೆ ಮತ್ತು ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರಿಗೆ ಸಲಹೆ ನೀಡಿದ ಅವರು, ಹಿರಿಯರ ಮಾರ್ಗದರ್ಶನ ಮತ್ತು ಆದರ್ಶವನ್ನು ನಾವು ಪಾಲಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಮಗೆ ಗೌರವ, ಉತ್ತಮ ಸ್ಥಾನಮಾನ ಸಿಗುತ್ತದೆ ಎಂದು ಹೇಳಿದರು.
ನಾನು ಮತ್ತು ನಟ ಸುದೀಪ್ ನಟಿಸಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಎಂಬ ಚಿತ್ರವು ಬಹುತೇಕ ನನ್ನ ಕೊನೆಯ ಚಿತ್ರವಾಗಬಹುದು.ಪೋಷಕ ಪಾತ್ರದಲ್ಲಿ ನಾನು ನಟಿಸುವುದಿಲ್ಲ ಎಂದು ಖಡಕ್ಕಾಗಿ ನುಡಿದ ಅವರು, ಈ ಸಿನಿಮಾಗಿಂತ ಒಳ್ಳೆಯ ಸಿನಿಮಾ ಮಾಡುವುದಾದರೆ, ನಾನು ನಟಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








