ಬೆಂಗಳೂರು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜಿಗೆ ದಿವಂಗತ ಶಾಸಕ ಸಿದ್ದು ಬಿ. ನ್ಯಾಮಗೌಡ ಅವರ ಹೆಸರು ನಾಮಕರಣ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಈ ಆದೇಶ ಹೊರಬಿದ್ದಿದೆ. ಚಿಕ್ಕಪಡಸಲಗಿಯಲ್ಲಿ ಸ್ವಂತ ಶ್ರಮದಿಂದ ಬ್ಯಾರೇಜ್ ನಿರ್ಮಿಸಿ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದ ಸಿದ್ದು ನ್ಯಾಮಗೌಡ ಅವರ ಹೆಸರನ್ನು ಬ್ಯಾರೇಜಿಗೆ ಇಡಬೇಕೆಂಬುದು ಆ ಭಾಗದ ರೈತರ ಆಶಯವಾಗಿತ್ತು.
ಸಿದ್ದು ನ್ಯಾಮಗೌಡರು ಮುತುವರ್ಜಿ ವಹಿಸಿ, ಸಂಪನ್ಮೂಲ ಕ್ರೋಡೀಕರಿಸಿ, ರೈತರ ಜತೆಗೂಡಿ ಶ್ರಮದಾನ ಮಾಡಿದ ಪ್ರಯುಕ್ತ ಚಿಕ್ಕಪಡಸಲಗಿ ಬ್ಯಾರೇಜ್ ಅಸ್ತಿತ್ವಕ್ಕೆ ಬಂದಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








