ದೇಶದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಉತ್ತೇಜಿಸಲು ಕಿಯಾ ಸಂಕಲ್ಪ

ಬೆಂಗಳೂರು

    ದೇಶದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಉತ್ತೇಜಿಸಲು ವಿಶ್ವದ 8ನೇ ಅತಿದೊಡ್ಡ ವಾಹನ ತಯಾರಿಕಾ ಸಂಸ್ಥೆ ಕಿಯಾ ಮೋಟಾರ್ಸ್ ಮುಂದಾಗಿದ್ದು, ಬೆಂಗಳೂರು ಫುಟ್ಬಾಲ್ ಕ್ಲಬ್‍ಗೆ ಬರುವ 2012-22ರ ವರೆಗೆ ನಾಲ್ಕು ವರ್ಷಗಳ ಸಹಭಾಗಿತ್ವಕ್ಕೆ ಸಹಿ ಮಾಡಿದೆ.
ಬರುವ ವರ್ಷ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಗೂ ಸಹ ಬೆಂಗಳೂರು ಫುಟ್ವಾಲ್ ಕ್ಲಬ್‍ಗೆ ಕಿಯಾ ಮೋಟಾರ್ಸ್ ಪ್ರಾಯೋಜಕತ್ವ ನೀಡಲಿದೆ.

      ಕಿಯಾ ಮೋಟಾರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಕುಕ್ಯೂನ್ ಶಿಮ್ ಮತ್ತು ಬೆಂಗಳೂರು ಫುಟ್ಬಾಲ್ ಕ್ಲಬ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾರ್ತ್ ಜಿಂದಾಲ್ ಸಮ್ಮುಖದಲ್ಲಿ ಒಪಂದಕ್ಕೆ ಸಹಿ ಹಾಕಲಾಯಿತು. ಭಾರತದ ಫುಟ್ಬಾಲ್ ತಂಡದ ನಾಯಕ ಹಾಗೂ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವನ್ನು ಮುನ್ನಡೆಸುತ್ತಿರುವ ಸುನಿಲ್ ಚಟ್ರಿ ಮತ್ತಿತರ ಆಟಗಾರರು ಉಪಸ್ಥಿತರಿದ್ದರು.

     ಬೆಂಗಳೂರು ಫುಟ್ಬಾಲ್ ಕ್ಲಬ್ ಕಳೆದ ಐದು ವರ್ಷಗಳಿಂದ ಅತ್ಯಂತ ಯಶಸ್ವಿ ಕ್ಲಬ್‍ಗಳಲ್ಲಿ ಒಂದೆಂದು ಗುರುತಿಸಿಕೊಂಡಿದ್ದು, 2013ರ ಬಳಿಕ ಪ್ರತಿವರ್ಷ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. 2016ರಲ್ಲಿ ನಡೆದ ಏಷ್ಯನ್ ಪುಟ್ಬಾಲ್ ಕಾನ್ಪಿಡರೇಷನ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ದೇಶದ ಮೊದಲ ಕ್ಲಬ್ ಎನ್ನುವ ಖ್ಯಾತಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ಪಾತ್ರವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link