ಬೆಂಗಳೂರು:
ವರದಕ್ಷಿಣೆ ಕಿರುಕುಳ ಕೇವಲ ಗಂಡಸರಿಂದಷ್ಟೇ ಅಲ್ಲ ಹೆಂಗಸರಿಂದಲೂ ನಡೆಯುತ್ತದೆ ಎಂದು ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದಲ್ಲಿ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸೊಸೆಗೆ ಅತ್ತೆಯಿಂದ ಕಿರುಕುಳವಾಗುತ್ತದೆ. ಆದರೆ ಮಾವನಿಂದ ಕಿರುಕುಳ ಎನ್ನುವುದನ್ನು ಕಡಿಮೆ ಪ್ರಮಾಣದಲ್ಲಿ ಕೇಳಿದ್ದೇವೆ ಎಂದರು.
ಹೆಣ್ಣಾಗಲಿ ಗಂಡಾಗಲಿ ಭೇದಭಾವ ತೋರಬಾರದು. ಇಂತಹ ವ್ಯಾಮೋಹ ಗಂಡಸರಿಗಷ್ಟೆ ಅಲ್ಲ ಹೆಂಗಸರಲ್ಲಿ ಕೂಡ ಇದೆ. ಗಂಡು ಮಗು ಬೇಕು ಅನ್ನುವ ವ್ಯಾಮೋಹ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರಿಂದ ಭ್ರೂಣ ಹತ್ಯೆಗಳು ಹೆಚ್ಚಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರು ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಜಾಗೃತರಾಗಬೇಕು. ಮಹಿಳೆಯರು ಮತ್ತು ಪುರುಷರ ನಡುವೆ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಕಂದಕ ಇದೆ. ಇದಕ್ಕೆ ಕಾರಣ ಮನುವಾದ ಕಾರಣ. ಮಹಿಳೆಯರು ನೂರಾರು ವರ್ಷಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಇದು ಸಹ ಹಲವು ಸಮಸ್ಯೆಗಳಿಗೆ ಮೂಲವಾಗಿದೆ ಎಂದರು.
ಹಿಂದಿನ ಸರ್ಕಾರದಲ್ಲಿ ತಮಗೆ ತೃಪ್ತಿಯಾಗುವ ರೀತಿಯಲ್ಲಿ ಕೆಲಸ ಮಾಡಿದ್ದೇನ. ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಕೆಲವರು ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹಲವು ಮಹಿಳೆಯರು ಮುಗಿಬಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








