ಹೊಸಕೆರೆ ಎಸ್‍ಬಿಐಗೆ ಶೀಘ್ರದಲ್ಲೆ ಸಿಬ್ಬಂದಿ ನೇಮಕ : ಟಿ.ಕೆ ಲೋಕನಾಥ್

ಮಧುಗಿರಿ

      ತಾಲ್ಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿ ಹೊಸಕೆರೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಶಾಖೆಗೆ ತುರ್ತಾಗಿ ಒಬ್ಬ ವ್ಯಸ್ಥಾಪಕರನ್ನು ಹಾಗೂ ಇತರೆ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಬ್ಯಾಂಕಿನ ಡಿಸ್ಟ್ರಿಕ್ಟ್ ರೀಜನಲ್ ಮ್ಯಾನೇಜರ್ ಟಿ.ಕೆ.ಲೋಕನಾಥ್ ತಿಳಿಸಿದ್ದಾರೆ.

      ಅ. 4 ರ ಗುರುವಾರ ಸದರಿ ಶಾಖೆಗೆ ಭೇಟಿ ನೀಡಿದ್ದಾಗ ಗ್ರಾಹಕರು ಗುಂಪು ಕೂಡಿ ಬ್ಯಾಂಕಿನ ಸಿಬ್ಬಂದಿ ಕೊರತೆಯಿಂದ ತಮಗೆಲ್ಲಾ ಬಹಳಷ್ಟು ತೊಂದರೆಯಾಗಿದೆ ಎಂದು ತಿಳಿಸಿದಾಗ ಅವರು, ಈಗಾಗಲೆ ಕನ್ನಡ ಭಾಷೆ ಬಲ್ಲಂತಹ ವ್ಯವಸ್ಥಾಪಕರನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲೆ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅಲ್ಲದೆ ಕೊರತೆಯಿರುವ ಇತರೆ ಸಿಬ್ಬಂದಿಯನ್ನು ಕೂಡ ಆದಷ್ಟು ಬೇಗ ವ್ಯವಸ್ಥೆ ಮಾಡಲಾಗುವುದು ಎಂದು ಲೋಕನಾಥ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

       ಸದರಿ ಬ್ಯಾಂಕಿನಲ್ಲಿ ಸುಮಾರು ಹತ್ತು ಸಾವಿರದಷ್ಟು ವಿವಿಧ ರೀತಿಯ ಖಾತೆದಾರರಿದ್ದಾರೆ. ಉಳಿತಾಯ ಖಾತೆ, ಠೇವಣಿದಾರರು, ಪಿಂಚಣಿದಾರರು, ಸರ್ಕಾರಿ ನೌಕಕರು, ಖಾಸಗಿ ನೌಕಕರರು ವೇತನ ಪಡೆಯುವುದಕ್ಕಾಗಿ, ವೃದ್ಧಾಪ್ಯ, ಅಂಗವಿಕಲರ, ವಿಧವೆಯರ, ಸಂಧ್ಯಾ ಸುರಕ್ಷಾ, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸ್ಕಾಲರ್‍ಶಿಪ್, ರೈತಾಪಿ ವರ್ಗದವರ ಕೃಷಿ ಸಾಲ ಪಡೆಯುವವರು, ಆಭರಣಗಳ ಸಾಲ ಪಡೆಯಲು, ಎನ್.ಆರ್.ಇ.ಜಿ.ಎ, ಗ್ಯಾಸ್ ಸಬ್ಸಿಡಿ, ಸ್ತ್ರೀಶಕ್ತಿ ಸಂಘಗಳಲ್ಲಿ ಸಾಲ ಪಡೆಯಲಿಕ್ಕಾಗಿ, ಪಶುಭಾಗ್ಯ ಯೋಜನೆಯ ಸಾಲ ಪಡೆಯಲು ಮುಂತಾದ ಎಲ್ಲಾ ರೀತಿಯ ವ್ಯವಸ್ಥೆಗಳಿಗೆ ಅತ್ಯಾವಶ್ಯಕವಾಗಿ ಈ ಬ್ಯಾಂಕಿಗೆ ಗ್ರಾಹಕರು ಅವಲಂಬಿತರಾಗಿರುತ್ತಾರೆ.

       ಆದ್ದರಿಂದ ಸದರಿ ಬ್ಯಾಂಕಿನಲ್ಲಿ ಸುಮಾರು ತಿಂಗಳುಗಳಿಂದಲೂ ಮ್ಯಾನೇಜರ್ (ಪರ್ಮನೆಂಟ್) ಮತ್ತು ಇತರೆ ನೌಕರರಿಲ್ಲದೆ, ಈ ಭಾಗದ ಜನತೆಗೆ ತುಂಬಾ ತೊಂದರೆಯುಂಟಾಗಿರುತ್ತದೆ. ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಕಾಲರ್ ಶಿಪ್ ಪಡೆಯಲು ಆನ್ ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ತೆರೆಯಲೇಬೇಕಾಗಿರುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಗ್ರಾಹಕರ ಮನವಿಗೆ ಸ್ಪಂದಿಸಿದ ಜೊತೆಗೆ ಲೋಕನಾಥ್, ಖಾತೆದಾರರೆಲ್ಲರಿಗೂ ಆದಷ್ಟು ಬೇಗ ಎಟಿಎಂ ಕಾರ್ಡ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link