ನವದೆಹಲಿ:
ಸತ್ತ ಇಲಿಯನ್ನು ನೆರೆಮನೆಗೆ ಎಸೆದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಎಸೆದವನನ್ನು ಹತ್ಯೆಗೈದಿದ್ದಾನೆ. ನೆರೆಮನೆಯಾತ ಕಬ್ಬಿಣದ ರಾಡ್ನಲ್ಲಿ ಹೊಡೆದ ಪರಿಣಾಮ ಆತ ಗಂಭೀರ ಗಾಯಗೊಂಡಿದಾನೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
40 ವರ್ಷದ ವ್ಯಕ್ತಿಗೆ ಆತನ ನೆರೆಮನೆಯವನೇ ರಾಡ್ನಿಂದ ಹೊಡೆದಿದ್ದ. ಸತ್ತ ಇಲಿಯನ್ನು ತಮ್ಮ ಮನೆಯ ಬಳಿ ಎಸೆದಿದ್ದಕ್ಕೆ ಕೋಪಗೊಂಡಿದ್ದ ಎನ್ನಲಾಗಿದೆ.
ಮೃತದೇಹವನ್ನು ಪೋಸ್ಟ್ ಮಾರ್ಟ್ಂಗೆ ಕಳಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
