ಎಸ್‍ಐಟಿಗೆ ಹಿಂದೂ ಕಾರ್ಯಕರ್ತರೇ ಟಾರ್ಗೇಟ್

ದಾವಣಗೆರೆ:

      ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿಗೆ ಹಂತಕರು ಬೇಕಾಗಿಲ್ಲ. ಬದಲಿಗೆ ಹಿಂದೂ ಕಾರ್ಯಕರ್ತರನ್ನೇ ಟಾರ್ಗೇಟ್ ಮಾಡಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು.

       ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕ ಸಂಬಂಧಿಸಿದಂತೆ ಎಸ್‍ಐಟಿ ವಶಕ್ಕೆ ಪಡೆದಿರುವ ಆಪಾದತರಾಗಿರುವ ಪರಶುರಾಮ ವಾಗ್ಮೋರೆ, ಮನೋಹರ್ ಎಡವೆ ಅವರುಗಳಿಗೆ ಎಸ್‍ಐಟಿ ಅಧಿಕಾರಿಗಳು ಅನತ್ಯವಾಗಿ ಟಾರ್ಚರ್ ನೀಡುತ್ತಿದ್ದಾರೆ. ಅಲ್ಲದೆ, 25 ಲಕ್ಷ ರೂ.ಗಳ ಆಮೀಷ ತೋರಿಸಿ ಹತ್ಯೆ ತಾವೇ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಅಲ್ಲದೆ, ಅವರ ಮನೆಗಳಿಗೂ ಹೋಗಿ ಧಮ್ಕಿ ಹಾಕುತ್ತಿದ್ದಾರೆಂಬುದಾಗಿ ಆರೋಪಿಗಳೇ ಮಾಧ್ಯಮಗಳ ಮುಂದೆ ನೇರ ಆರೋಪ ಮಾಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

       ಎಸ್‍ಐಟಿ ಅವರು ಆರೋಪಿಗಳಿಗೆ ನೀರುತ್ತಿರುವ ಕಿರುಕುಳವನ್ನು ನೋಡಿದರೆ, ಎಸ್‍ಐಟಿಗೆ ಹಂತಕರು ಬೇಕಾಗಿಲ್ಲ. ಬದಲಿಗೆ ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳನ್ನೇ ಟಾರ್ಗೇಟ್ ಮಾಡುವುದೇ ಇದರ ಮೂಲ ಗುರಿಯಾಗಿದೆ. ಬರೀ ಹಿಂದು ಕಾರ್ಯಕರ್ತರ ವಿರುದ್ಧ ತನಿಖೆ ನಡೆಸುವುದನ್ನು ಬಿಟ್ಟು, ಗೌರಿ ಲಂಕೇಶ್ ನಕ್ಸಲರನ್ನು ಮುಖ್ಯವಾಹಿನಿಗೆ ತಂದಿದ್ದರು. ಬಳಿಕ ನಕ್ಸರಲ್ಲೇ ಸಂಘರ್ಷ ಏರ್ಪಟ್ಟಿತ್ತು. ಹೀಗಾಗಿ ಅವರೂ ಹತ್ಯೆ ಮಾಡಿರುವ ಸಾಧ್ಯತೆ ಇದೆ. ಆದ್ದರಿಂದ ಎಸ್‍ಐಟಿ ಈ ಅಯಾಮದಲ್ಲೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

       ಗೌರಿ ಹತ್ಯೆಯಾಗಿ ಎರಡನೇ ದಿನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಹತ್ಯೆಯ ಹಿಂದೆ ಆರ್‍ಎಸ್‍ಎಸ್ ಹಾಗೂ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂಬುದಾಗಿ ಹೇಳಿದ್ದರು. ಹೀಗೆ ಹೇಳಿಕೆ ನೀಡಲು ರಾಹಲ್ ಡಿಎಸ್‍ಪಿಯೇ?, ಡಿಐಜಿಯೇ ಎಂದು ಪ್ರಶ್ನಿಸಿದ ಮುತಾಲಿಕ್, ಈ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರ ಪಾತ್ರ ಇಲ್ಲ ಎಂಬುದು ಸಾಬೀತಾದರೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದರು.

      ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವವರೆಲ್ಲರೂ ನಿರಪರಾಧಿಗಳಾಗಿದ್ದು, ಈ ಪ್ರಕರಣದ ತನಿಕೆಯ ಜಾಡು ತಪ್ಪಿಸುವ ಹುನ್ನಾರವನ್ನು ಎಸ್‍ಐಟಿ ನಡೆಸುವ ಮೂಲಕ, ಕರ್ನಾಟಕ ಪೊಲೀಸರನ್ನು ಬಲಿಪಶು ಮಾಡಲು ಹೊರಟಿದೆ ಎಂದು ಆರೋಪಿಸಿದರು.

        ಬಂಧಿತ ಆರೋಪಿ ನವೀನ್ ಚೀಲದಲ್ಲಿ 12 ಬುಲೇಟ್‍ಗಳನ್ನು ಎಸ್‍ಐಟಿಯೇ ಇಟ್ಟುಬಿಟ್ಟು, ನವೀನ್ ಬುಲೇಟ್ ಮಾರಾಟ ಮಾಡುತ್ತಿದ್ದ ಎಂಬುದಾಗಿ ಬಿಂಬಿಸಲು ಹೊರಟಿದೆ. ಗೌರಿ ಹಂತಕರು ಪಲ್ಸರ್‍ನಲ್ಲಿ ಬಂದಿದ್ದರು. ಹೋಂಡಾದಲ್ಲಿ ಬಂದಿದ್ದರು ಎಂಬುದಾಗಿ ಹೇಳುತ್ತಿದ್ದ ಎಸ್‍ಐಟಿ ಈಗ ಲೂನಾದಲ್ಲಿ ಬಂದಿದ್ದರು ಎಂಬುದಾಗಿ ಹೇಳುತ್ತಿದೆ. ಹೀಗೆ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ಆಪಾದಿಸಿದರು.

        ಶ್ರೀರಾಮ ಸೇನೆ ಯಾವುದೇ ರಾಜಕೀಯ ಮಾಡುವುದಿಲ್ಲ. ಇನ್ನೂ ಮುಂದೆ ಸೇನೆ ರಾಜಕೀಯದಿಂದ ದೂರ ಉಳಿದುಕೊಳ್ಳಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link