ಮಧುಗಿರಿ
ಪಾವಗಡ ರಾಜ್ಯ ಹೆದ್ದಾರಿ ಕೆ ಶಿಪ್ ರಸ್ತೆಯ ಮಿಡಿಗೇಶಿ ಬಸ್ ನಿಲ್ದಾಣದ ಬಳಿ ಹಾಗೂ ಹೊಸಕೆರೆ ಗ್ರಾಮದ ಬಸ್ ನಿಲ್ದಾಣದ ಬಳಿ ಎಂಟು ಬಲ್ಪಗಳನ್ನು ಅಳವಡಿಸಿರುವಂತಹ ಹೈಮ್ಯಾಕ್ಸ್ ದೀಪದ ಕಂಬವನ್ನು ಅಳವಡಿಸಲಾಗಿದ್ದು ಸರಿಯಷ್ಠೇ ಸದರಿ ದೀಪಗಳು ಒಂದೆರೆಡು ತಿಂಗಳುಗಳ ಕಾಲ ಒಳ್ಳೆಯ ಬೆಳಕನ್ನು ನೀಡಿದ್ದು ಈ ಬೆಳಕನ್ನು ಕಂಡ ಗ್ರಾಮಪಂಚಾಯಿತಿಯವರು ಈ ಹಿಂದೆ ಕಂಬಗಳಿಗೆ ಅಳವಡಿಸಲಾಗಿದ್ದ ಬೆಳಕಿನ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದರು.
ಈಗ ಗ್ರಾಮಪಂಚಾಯಿತಿಯವರಿಂದಲೂ ಬಸ್ ನಿಲ್ದಾಣದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲಾದಾಯಿತು. ಹೈಮ್ಯಾಕ್ಸ್ ದೀಪವನ್ನು ಅಳವಡಿಸಲು ಸಂಸದರ ನಿಧಿಯ ಯೋಜನೆಯ ಹಣವನ್ನು ಪಡೆದ ಗುತ್ತಿಗೆದಾರರು ಹಣವನ್ನು ಪಡೆದುಕೊಂಡರೆವರತು ಜನರಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣ ವಫಲರಾಗಿದ್ದಾರೆ. ಹೈಮ್ಯಾಕ್ಸ್ ಕಂಬಕ್ಕೆ ದೀಪಗಲನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೈತೊಳೆದುಕೊಂಡಿದ್ದಾರೆ.
ಸರ್ವಿಸ್‍ನ್ನು ಮಾತ್ರ ( ಲೈಸನ್ಸ್) ಪಡೆದುಕೊಂಡಿರದೆ ಇದ್ದು ಮೀಟರ್ ಅಳವಡಿಸದೆಯೇ ಇದ್ದುದರಿಂದ ಕೆಲವು ದಿನಗಳಕಾಲ ಸುಮ್ಮನಿದ್ದ ಬೆಸ್ಕಾ/ ಕಿ.ಪಿ.ಟಿ.ಸಿ.ಎಲ್ ಇಲಾಖೆಯವರು ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿರುತ್ತಾರೆ. ಆದ್ದರಿಂದ ಸಂಸದರ ನಿಧಿಯಿಂದ ಅಳವಡಿಸಲಾಗಿರುವ ಹೈಮ್ಯಾಕ್ಸ್ ದೀಪದ ವ್ಯವಸ್ಥೆ ಯಾವ ಪುರುಷಾರ್ಥಕ್ಕಾಗಿ ಎಂಬುದು ಪ್ರಜ್ಞಾವಂತ ನಾಗರಿಕರ ಯಕ್ಷ ಪಶ್ನೇ? ಸದರಿ ಹೈಮ್ಯಾಕ್ಸ್ ದೀಪದ ವ್ಯವಸ್ಥೆಯ ಗುತ್ತಿಗೆದಾರರಿಗೆ ಹಲವಾರು ಮಂದಿ ದೂರವಾಣಿ ಮೂಲಕ ಪ್ರಶ್ನಿಸಿದರಾದರು ಸಹ ಕಿವುಡನಮುಂದೆ ಕಿನ್ನರಿ ಬಾರಿಸಿದಂತಾಗಿರುತ್ತದೆಯಾದರಿಂದ ಜಿಲ್ಲೆಯ ಸಂಸದರು ಈ ಬಗ್ಗೆ ಗಮನಹರಿಸುವ ಮೂಲಕ ಅತಿ ಶೀಘ್ರದಲ್ಲಿ ಹೈಮ್ಯಾಕ್ಸ್ ನ ಬೆಳಕಿನ ವ್ಯವಸ್ಥೆಗೆ ಮುಂದಾಗುವರೆ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ