ಬೆಂಗಳೂರು
ರಾಮನಗರ ಕ್ಷೇತ್ರದ ಉಪ ಚುನಾವಣೆಗೆ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಜೆಡಿಎಸ್‍ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ರಾಮನಗರ ಜೆಡಿಎಸ್ ಮುಖಂಡ ಕೂಟಗಲ್ ದೇವೇಗೌಡರ ಮನೆಯಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿಯಲ್ಲಿ ಅನಿತಾ ಕುಮಾರ ಸ್ವಾಮಿ ರಾಮನಗರ ಉಪ ಚುನಾವಣೆ ಅಭ್ಯರ್ಥಿಯಾಗಿ 11ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಾಲೂಕು ಅಧ್ಯಕ್ಷ ರಾಜಶೇಖರ್ ಹೇಳಿಕೆ ನೀಡುತ್ತಿದ್ದಂತೆ ಹಿರಿಯ ಮುಖಂಡ ಅಪ್ಪಾಜಿಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅನಿತಾಕುಮಾರಸ್ವಾಮಿ ಸ್ಪರ್ಧಿಸುವ ವಿಚಾರಕ್ಕೆ ಮುಖಂಡರ ಸಭೆಯನ್ನು ಕರೆಯದೆ ಏಕಾಏಕಿ ಘೋಷಣೆ ಮಾಡ್ತಿದ್ದೀರಿ. ಕಾರ್ಯಕರ್ತರ ಸಭೆ ಕೂಡ ಕರೆಯದೆ ಏಕೆ ಗೊಂದಲ ಮೂಡಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಹಲವು ಮುಖಂಡರು ಕೈ ಜೋಡಿಸಿ ಅಸಮಾಧಾನ ಹೊರಹಾಕಿದ್ದಾರೆ.
ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷರು, ಕೆಲವೇ ಕೆಲವು ಮುಖಂಡರು ಏಕಾಏಕಿ ನಿರ್ಧಾರ ಮಾಡಿದ್ದಾರೆ. ಜೆಡಿಎಸ್ ಕೇವಲ ಐದಾರು ಮುಖಂಡರ ಪಕ್ಷವೇ ಎಂದು ಕಿಡಿಕಾರಿದರು.
ಕುಮಾರಣ್ಣ ಯಾರನ್ನೇ ಅಭ್ಯರ್ಥಿ ಮಾಡಿದ್ರೂ ಜನತೆ ವೋಟು ಹಾಕ್ತಾರೆ. ಆದರೆ ಮುಖಂಡರ ನಿರ್ಧಾರ ಕಾರ್ಯಕರ್ತರಿಗೆ ಇರುಸುಮುರುಸು ಉಂಟು ಮಾಡಿದೆ. ಇದು ಈ ಚುನಾವಣೆಯಲ್ಲಿ ಸಾಕಷ್ಟು ಮುಖಂಡರ ವಿರೋಧಕ್ಕೂ ಕಾರಣವಾಗಿದೆ. ಕೂಡಲೇ ಕುಮಾರಸ್ವಾಮಿ ಕಾರ್ಯಕರ್ತರ ಸಭೆ ಕರೆದು ಗೊಂದಲ ಸರಿಪಡಿಸಬೇಕು. ಇಲ್ಲವಾದಲ್ಲಿ ಚುನಾವಣೆ ಮೇಲೆ ಸಾಕಷ್ಟು ದುಷ್ಪರಿ ಣಾಮ ಬೀರುತ್ತದೆ ಎಂದು ಕಾರ್ಯಕರ್ತರು ಅಳಲು ತೋಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
