ಬೆಂಗಳೂರು
ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕಾಗಿದೆ. ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ.
ಸುಬ್ರಹ್ಮಣ್ಯದಲ್ಲಿ 16 ಸೆಂಟಿ ಮೀಟರ್, ಮಂಗಳೂರು 11, ಪಣಂಬೂರು 9, ಹುಣಸೂರು, ಎಚ್.ಡಿ.ಕೋಟೆ ತಲಾ 6, ಕಾರ್ಕಳ, ಕುಂದಾಪುರ, ಮಡಿಕೇರಿ, ಯಳಂದೂರು, ಶ್ರೀರಂಗಪಟ್ಟಣ, ಮಳವಳ್ಳಿಗಳಲ್ಲಿ ತಲಾ 4, ಮುಲ್ಕಿ, ಭಾಗಮಂಡಲ, ಪಿರಿಯಾಪಟ್ಟಣ, ಮೈಸೂರು, ಚಾಮರಾಜನಗರ ಪಿಟಿಒ, ಹೊಸಕೋಟೆಗಳಲ್ಲಿ ತಲಾ 3, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಉಡುಪಿ, ವಿರಾಜಪೇಟೆ, ಕುಶಾಲನಗರ, ಮಾಲೂರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ. ಗರಿಷ್ಠ ತಾಪಮಾನ 34.8 ಡಿಗ್ರಿ ಸೆಲ್ಷಿಯಸ್ ಕಲಬುರಗಿಯಲ್ಲಿ, ಕನಿಷ್ಠ ತಾಪಮಾನ 18.6 ಡಿಗ್ರಿ ಸೆಲ್ಷಿಯಸ್ ಮೈಸೂರಿನಲ್ಲಿ ದಾಖಲಾಗಿದೆ. ಮುನ್ಸೂಚನೆಯಂತೆ ಕರಾವಳಿಯ ಬಹುತೇಕ ಕಡೆ ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಅಲ್ಲಿಲ್ಲಿ ಗುಡುಗು ಸಹಿತ ಮಳೆ ಸಂಭವ. ಬೆಂಗಳೂರಿನಲ್ಲಿ ಭಾಗಶಃ ಮೋಡದ ವಾತಾವರಣವಿದ್ದು, ಮಳೆಯಾಗುವ ಸೂಚನೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
