ಪಾವಗಡ
ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉತ್ತಮವಾದ ಯೋಜನೆಗಳು ಜಾರಿಯಾಗುತ್ತಿದ್ದು, ವಿದ್ಯಾರ್ಥಿಗಳು ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಪುರಸಭಾಧ್ಯಕ್ಷೆ ಸುಮಾಅನಿಲ್ ತಿಳಿಸಿದರು.
ಅವರು ಮಂಗಳವಾರ ಪಾವಗಡ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 9 ಮತ್ತು 10 ನೇ ತರಗತಿ ಎಸ್.ಸಿ. ಮತ್ತು ಎಸ್.ಟಿ. ಹಾಗೂ ಕಲಿಕೆ ಹಿಂದುಳಿದ ಇತರೆ ವರ್ಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಶ್ವಾಸ ಕಿರಣ ವಿಶೇಷ ಬೋಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಖಾಸಗಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹೆಚ್ಚು ಸೌಲಭ್ಯಗಳು ದೊರಕುವುದಿಲ್ಲ. ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಯೋಜನೆಗಳನ್ನು ಬಳಸಿಕೊಂಡು ಉನ್ನತ ಅಧಿಕಾರಿಗಳು ಮತ್ತು ಉತ್ತಮ ರಾಜಕಾರಣಿಗಳಾಗಬೇಕೆಂದು ಹಾರೈಸಿದರು.