ಹಿರಿಯೂರಿನಲ್ಲಿ ವಿಶ್ವದೃಷ್ಟಿ ದಿನಾಚರಣೆ ಅಂಗವಾಗಿ ಉಚಿತ ನೇತ್ರತಪಾಸಣೆ

ಹಿರಿಯೂರು:

       ನಗರದ ರೆಡ್‍ಕ್ರಾಸ್‍ಸಂಸ್ಥೆ, ರೋಟರಿಕ್ಲಬ್ ನಂತಹ ಸೇವಾಸಂಸ್ಥೆಗಳು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಸಮಾಜಮುಖಿಯಾಗಿ ಜನಪರ ಕಾಳಜಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿಗಳಾದ ಡಾ||ಲಕ್ಷ್ಮೀಕಾಂತ್‍ರವರು ಹೇಳಿದರು.

       ನಗರದ ರೋಟರಿಕ್ಲಬ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಸರ್ಕಾರಿ ಆಸ್ಪತ್ರೆ ಮತ್ತು ಅಂಧತ್ವ ನಿವಾರಣಾ ಸಮಿತಿ ಹಿರಿಯೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವದೃಷ್ಟಿ ದಿನಾಚರಣೆ ಅಂಗವಾಗಿ ಮಧುಮೇಹ ಪೀಡಿತರಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತನೇತ್ರ ತಪಾಸಣೆ ಮತ್ತು ಚಿಕಿತ್ಸಾಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಮಧುಮೇಹ ಇರುವವರು ತಮ್ಮ ಯಾವುದೇ ಖಾಯಿಲೆಗಳನ್ನು ಅಲಕ್ಷಿಸುವಂತಿಲ್ಲ, ಸಕ್ಕರೆ ಖಾಯಿಲೆಯಿಂದ ಯಾವೊಂದು ಖಾಯಿಲೆ ತ್ವರಿತ ಗತಿಯಲ್ಲಿ ಹೆಚ್ಚಾಗುತ್ತದೆ, ಶೀಘ್ರವಾಗಿ ತಜ್ಞ ವೈದ್ಯರ ಸೂಕ್ತ ಸಲಹೆ, ಚಿಕಿತ್ಸೆಗಳನ್ನು ಬೇಗ ಪಡೆಯುವುದರಿಂದ ತಾವುಗಳು ಆರೋಗ್ಯಜೀವನ ನಡೆಸಲು ಸಾಧ್ಯ ಎಂದರಲ್ಲದೆ ಯಾವೊಂದು ಖಾಯಿಲೆಗಳನ್ನು ಅಲಕ್ಷಿಸುವುದು ಬೇಡ ಎಂಬುದಾಗಿ ಹೇಳಿದರು.

     ನೇತ್ರತಜ್ಞ ವೈದ್ಯರಾದ ಡಾ||ಎಂ.ಎಂ.ಸಂದೀಪ್ ಮಾತನಾಡಿ, ಮಧುಮೇಹಿಗಳ ಕಣ್ಣುಗಳ ಅಕ್ಷಿಪಟಲ ಬೇಗ ಹಾಳಾಗುವುದರಿಂದ ದೃಷ್ಟಿಹೀನರಾಗುತ್ತೀರಿ, ಪ್ರತಿಯೊಬ್ಬರೂ ತಜ್ಞ ವೈದ್ಯರುಗಳಲ್ಲಿ ಬಂದು ತಪಾಸಣೆ, ಚಿಕಿತ್ಸೆ ಪಡೆಯುವುದರಿಂದ ತಮ್ಮ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬಹುದು. ಆದ್ದರಿಂದ ಇಂತಹ ಶಿಬಿರಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಕೋರಿದರು.

        ಈ ಸಂದರ್ಭದಲ್ಲಿ ರೆಡ್‍ಕ್ರಾಸ್ ಉಪಾಧ್ಯಕ್ಷರಾದ ಹೆಚ್.ಎಸ್.ಸುಂದರ್‍ರಾಜ್ ರೋಟರಿ ಅಧ್ಯಕ್ಷರು ಎಂ.ಎಸ್.ರಾಘವೇಂದ್ರ, ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಹೆಚ್.ವೆಂಕಟೇಶ್, ಎಂ.ವಿ.ಹರ್ಷಾ, ಎ.ರಾಘವೇಂದ್ರ, ಎಸ್.ಜೋಗಪ್ಪ ರೆಡ್‍ಕ್ರಾಸ್‍ನ ಎಂ.ಎನ್.ಸೌಭಾಗ್ಯವತೀದೇವರ್, ಪಿ.ಆರ್.ಸತೀಶ್‍ಬಾಬು, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಹೆಚ್.ಎಸ್.ರಾಧಾಕೃಷ್ಣ, ದೇವರಾಜ್ ಮೂರ್ತಿ, ಸರ್ಕಾರಿ ಆಸ್ಪತ್ರೆ, ನೇತ್ರ ವೈದ್ಯರಾದ ಡಾ||ಎಂ.ಎಂ.ಸಂದೀಪ್ ಸಿಬ್ಬಂದಿಗಳಾದ ಎಲ್.ಮೋಹನ್, ಗಿರಿಯಪ್ಪ, ಪಂಚಾಕ್ಷರಯ್ಯ, ತಿಪ್ಪೇಸ್ವಾಮಿ ಇತರರು ಭಾಗವಹಿಸಿದ್ದರು.

       ಈ ಶಿಬಿರದಲ್ಲಿ ಸುಮಾರು 60 ಜನರು ತಪಾಸಣೆ ನಡೆಸಿ, 12 ಜನರಿಗೆ ಸಕ್ಕರೆ ಖಾಯಿಲೆ, 15 ಜನರಿಗೆ ರೆಟೀನಾ ತೊಂದರೆ, ಸುಮಾರು 27 ಜನರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಿಳಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link