ಶಿರಾ
ತಾಲ್ಲೂಕಿನ ಖ್ಯಾತ ವೈದ್ಯರಾದ ಡಾ.ಹಂಪಣ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ಶಿರಾ ನಗರದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಮೃತರ ಪಾರ್ಥಿವ ಶರೀರಕ್ಕೆ ವೈದ್ಯರ ಸಂಘ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸಂತಾಪ ಸೂಚಿಸಿದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ತಾ. ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಆಡಳಿತ ವೈದ್ಯಾಧಿಕಾರಿ ಡಾ.ಮುಬಾರಕ್, ತಾ.ವೈದ್ಯಾಧಿಕಾರಿ ಡಾ.ಅಫ್ಜಲ್, ಡಾ.ರಾಮಕೃಷ್ಣ, ಡಾ.ಶಂಕರ್, ಡಾ.ಚಿದಾನಂದಪ್ಪ, ಡಾ.ಡಿ.ಎಂ.ಗೌಡ, ಡಾ.ವಿನಯ್ಕುಮಾರ್, ಡಾ.ಮಂಜುನಾಥ್, ಟಿ.ಡಿ.ಮಲ್ಲೇಶ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








