ದಾವಣಗೆರೆ :
ನಗರದ ಒಕ್ಕಲಿಗರ ಪೇಟೆಯ ಶ್ರೀಹಾಲ್ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಶುಕ್ರವಾರದಂದು ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅನ್ನ ಸಂತರ್ಪಣೆಗೆ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಪಿ.ಎನ್.ಚಂದ್ರಶೇಖರ್, ಗೌಡ್ರು ರಾಜಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮುದೇಗೌಡ್ರು ಗೀರೀಶ್, ಬಂಗಾರದ ಅಂಗಡಿ ಗಿರೀಶ್, ಬೂದಾಳ್ ಬಾಬು, ಬಿ.ಎಸ್. ರಾಘವೇಂದ್ರ ಶೆಟ್ಟಿ, ಸೋಡಾ ಗಣೇಶ್, ಗೋವಿಂದರಾಜಶೆಟ್ಟಿ, ಅಣ್ಣಪ್ಪ, ಶಿವು, ಜಗದೀಶ್ ಗೌಡ, ಹರಿಹರ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ