ಕಾರವಾರ: 
ಕಾರವಾರದ ಮಾಜಿ ಶಾಸಕ ಶ್ರೀ ಆನಂದ್ ಅಸ್ನೋಟಿಕರ್ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ತಾಕತ್ತಿದ್ದರೆ ಶಿರಸಿಯಲ್ಲಿ ನೀಡಿರುವ ಹೇಳಿಕೆಯಂತೆ ಐದು ತಿಂಗಳ ಅವಧಿಯಲ್ಲಿ ಅಂಕೋಲಾದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಅವರು ಹಿಂದೊಮ್ಮೆ ಅನಂತ ಕುಮಾರ್ ಹೆಗಡೆ ಒಬ್ಬ ಲೋಫರ್, ನಾಲಾಯಕ್ ಎಂದು ಹೇಳಿಕೆ ನೀಡಿದ್ದೆ. ಆ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಕಿಡಿ ಹೊತ್ತಿಸಿದ್ದಾರೆ . ಅನಂತ ಕುಮಾರ ಹೆಗಡೆ ರಾಜಕೀಯಕ್ಕೆ ಬಂದಿರುವುದು ಸಮಾಜ ಸೇವೆಗೆ ಅಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








