ಬೆಂಗಳೂರು
ಎಚ್.ಎ.ಎಲ್‍ನಂತಹ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಆಧುನಿಕ ಭಾರತದ ದೇವಾಲಯಗಳಾಗಿದ್ದು, ಇವುಗಳನ್ನು ನಾಶಪಡಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕಬ್ಬನ್ ಪಾರ್ಕ್ ಸಮೀಪದ ಮೆಟ್ರೋ ರೈಲು ನಿಲ್ದಾಣ ಸಮೀಪದ ಮಿನ್ಸ್ ಸ್ಕೇರ್‍ನಲ್ಲಿ ಎಚ್.ಎ.ಎಲ್, ವಾಯುಪಡೆ, ಸೇನಾ ಪಡೆಗಳ ಹಾಲಿ ಮತ್ತು ನಿವೃತ್ತ ನೌಕರರ ಜತೆ ಸಂವಾದ ನಡೆಸಿದ ಅವರು, ಸಾರ್ವಜನಿಕ ಸಂಸ್ಥೆಗಳು ದೇಶದ ರಕ್ಷಣಾ ವ್ಯವಸ್ಥೆ ಮತ್ತು ಸರ್ಕಾರದ ಬೆನ್ನೆಲುಬುಗಳಾಗಿವೆ. ಇವುಗಳ ರಕ್ಷಣೆಗೆ ನಾವು ಸದಾ ನಿಮ್ಮೊಂದಿಗಿರುತ್ತೇವೆ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಪ್ರತಿಜ್ಞೆ ಮಾಡಿದರು.
ಎಚ್.ಎ.ಎಲ್ ಸಾಲದಲ್ಲಿಲ್ಲ. ಈ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ಐದು ಸಾವಿರ ಕೋಟಿ ರೂ ಕೊಡುಗೆ ನೀಡಿದೆ. ಆದರೆ ಹತ್ತು ದಿನಗಳ ಸಂಸ್ಥೆ ಅನಿಲ್ ಅಂಬಾನಿ ಸಂಸ್ಥೆ 43 ಸಾವಿರ ಕೋಟಿ ರೂ ಸಾಲದಲ್ಲಿದೆ. ನಷ್ಟದಲ್ಲಿರುವ ಸಂಸ್ಥೆಗೆ ಗುತ್ತಿಗೆ ನೀಡಿದ್ದು ಯಾಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಎಚ್.ಎ.ಎಲ್. ಅಷ್ಟೇ ಅಲ್ಲ, ಡಿ.ಆರ್.ಡಿ.ಒ, ಸೇರಿದಂತೆ ಯಾವುದೇ ರಕ್ಷಣಾ ಸಂಸ್ಥೆ, ಅಥವಾ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ರಕ್ಷಣೆಗಾಗಿ ದಿನ 24 ಗಂಟೆಯಲ್ಲಿ ಯಾವಾಗ ಕರೆದರೂ ಸಹ ಬರುತ್ತೇನೆ. ನನ್ನ ದೃಷ್ಟಿಯಲ್ಲಿ ಎಚ್‍ಎಎಲ್ ಅಂದರೆ ಕಂಪೆನಿ ಅಲ್ಲ. ಇದು ದೇಶದ ಶಕ್ತಿ ಇದ್ದಂತೆ. ದೇಶದ ವೈಮಾನಿಕ ಕ್ಷೇತ್ರದಲ್ಲಿ ಹೆಚ್‍ಎಎಲ್ ಕೊಡುಗೆ ಅಪಾರ. ಇಲ್ಲಿಗೆ ಬಂದು ಮಾತನಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಭಾರತದ ಸಾಧನೆಯಲ್ಲಿ ಎಚ್‍ಎಎಲ್ ಪಾತ್ರ ಅತ್ಯಂತ ದೊಡ್ಡದಿದೆ ಎಂದರು.
ಎಚ್.ಎ.ಎಲ್‍ಗೆ ರಫೆಲ್ ಯುದ್ಧ ವಿಮಾನ ನಿರ್ಮಾಣ ಮಾಡುವ ಸಾಮಥ್ರ್ಯವಿಲ್ಲ ಎಂದು ಸರ್ಕಾರದ ಹಿರಿಯ ಸಚಿವರು [ ನಿರ್ಮಲಾ ಸೀತಾರಾಮನ್ ] ಹೇಳಿದ್ದರೆ. ಅವರಿಗೆ ಏನು ಸಾಮಥ್ರ್ಯವಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಎಚ್.ಎ.ಎಲ್ ಸಿಬ್ಬಂದಿಗಳಿಗೆ ಈ ಬೆಳವಣಿಗೆಯಿಂದ ನೋವಾಗಿರಯುವುದು ಸಹಜ. ಈ ಸಂಸ್ಥೆಗೆ 78 ವರ್ಷಗಳ ಇತಿಹಾಸವಿದೆ. ರಫೆಲ್ ಯುದ್ಧ ವಿಮಾನ ಉತ್ಪಾದನೆಗೆ ಅವಕಾಶ ನೀಡುವ ಸಂಸ್ಥೆಗೆ ಕೇವಲ 10 ದಿನಗಳ ಇತಿಹಾಸವಿದೆ. ಇದನ್ನು ನೋಡಿದರೆ ವಾಸ್ತವ ಸಂಗತಿ ಏನೆಂಬುದು ಸ್ಪಷ್ಟವಾಗುತ್ತದೆ ಅನಿಲ್ ಅಂಬಾನಿ ಕಂಪೆನಿಗೆ ಗುತ್ತಿಗೆ ನೀಡಿದ್ದು ತಮಗೆ ತೀವ್ರ ನೋವಾಗಿದ್ದು, ಅದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಸಾರ್ವಜನಿಕ ಸಂಸ್ಥೆಗಳ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ರಫೆಲ್ ಯುದ್ಧ ವಿಮಾನ ತಯಾರಿಸುವ ಗುತ್ತಿಗೆ ಪಡೆಯುವುದು ನಿಮ್ಮ ಹಕ್ಕು. ಈ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ಆದರೆ ಹನ್ನೆರಡು ದಿನದ ಕಂಪನಿಗಿಲ್ಲ. ರಫೆಲ್ ಯುದ್ಧ ವಿಮಾನ ನಿರ್ಮಾಣ ಮಾಡುವ ಸಾಮಥ್ರ್ಯ ಎಚ್.ಎ.ಎಲ್‍ಗಿದೆ. ಇದು ಗೊತ್ತಿರುವ ಎಚ್.ಎ.ಎಲ್ ಆಡಳಿತ ಮಂಡಳಿ ಸಹ ಒತ್ತಡದಲ್ಲಿದೆ ಎನ್ನುವುದು ನನಗೆ ಗೊತ್ತಿದೆ. ಆದರೆ ದೇಶದ ರಕ್ಷಣಾ ಉತ್ಪನ್ನಗಳನ್ನು ಉತ್ಪಾದಿಸುವ ಜವಾಬ್ದಾರಿ ಸರ್ಕಾರದ ವಶದಲ್ಲೇ ಇರಬೇಕು ಎಂದರು.
ಇತ್ತಿಚೆಗೆ ಮಾಧ್ಯಮಗಳು ಸಹ ನಮ್ಮ ಮಾತುಗಳನ್ನು ಕೇಳುವುದಿಲ್ಲ. ನಾವು ಏನಾದರೂ ಹೇಳಿದರೆ ಅಣಕ ಮಾಡುತ್ತವೆ. ಇದು ದೇಶದ ನಗ್ನ ಸತ್ಯವಾಗಿದೆ ಎಂದು ಮಾಧ್ಯಮಗಳ ವಿರುದ್ಧ ತೀಕ್ಷ್ಣವಾಗಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ