ಮೋದಿ ಅನಿಲ್ ಅಂಬಾನಿ ಕಂಪೆನಿಗೆ 30 ಸಾವಿರ ಕೋಟಿ ಅನುಕೂಲ ಮಾಡಿಕೊಟ್ಟಿದ್ದಾರೆ

ಬೆಂಗಳೂರು

       ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಿಲ್ ಅಂಬಾನಿ ಕಂಪೆನಿಗೆ 30 ಸಾವಿರ ಕೋಟಿ ರೂ ಅನುಕೂಲ ಮಾಡಿಕೊಟ್ಟಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಈ ಹಗರಣ ಮುಚ್ಚಿ ಹಾಕಲು ಫ್ರಾನ್ಸ್‍ಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಗಂಭೀರ ಆರೋಪ ಮಾಡಿದರು.

      ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅನಿಲ್ ಅಂಬಾನಿ ಅವರಿಗೆ ಅನುಕೂಲ ಮಾಡಿಕೊಡಲು ಭ್ರಷ್ಟಾಚಾರ ಮಾಡಿದ್ದಾರೆ. ಈ ವಿಷಯದಲ್ಲಿ ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದೇನೆ ಎಂದು ದೂರಿದರು.

      ರಕ್ಷಣಾ ಸಚಿವರು ಸುಳ್ಳು ಹೇಳುತ್ತಾರೆ. ದೇಶದ ಜೀವನ್ನು ಅನಿಲ್ ಅಂಬಾನಿಗೆ ನೀಡುತ್ತಿದ್ದಾರೆ. ಎಚ್.ಎ.ಎಲ್‍ಗೆ ಅಪಾರ ಅನುಭವಿದ್ದು, ರಕ್ಷಣಾ ಸಚಿವರಿಗೆ ಯಾವುದೇ ಅನುಭವವಿಲ್ಲ. ದೇಶದ ಎಲ್ಲಾ ಯುವಕರಿಗೆ ಮನವಿ ಮಾಡುತ್ತಿದ್ದೇನೆ. ಅನಿಲ್ ಅಂಬಾನಿ ಅವರಿಗೆ ಈ ಗುತ್ತಿಗೆ ನೀಡಿರುವುದು ಸರಿಯಲ್ಲ. ಇದರಿಂದ ಸಹಸ್ರಾರು ಯುವಕರಿಗೆ ಅನ್ಯಾಯವಾಗಿದೆ ಎಂದು ಹೇಳಿದರು.

      ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅನಿಲ್ ಅಂಬಾನಿ ಭಾರತ ಸರ್ಕಾರದ ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯಾಗಿದ್ದಾರೆ. ಅನಿಲ್ ಅಂಬಾನಿ ಅವರಿಗೆ ಯಾವುದೇ ಅನುಭವವಿಲ್ಲ. ಎಚ್.ಎ.ಎಲ್‍ಗೆ ಅನುಭವಿದೆ. ನಾವು ಸಾರ್ವಜನಿಕ ಉದ್ಯಮದ ಪರವಾಗಿರುತ್ತೇವೆ ಎಂದು ಹೇಳಿದರು.

      ಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಹಜವಾಗಿಯೇ ನಮ್ಮ ಆಯ್ಕೆ ಎಚ್.ಎ.ಎಲ್ ಆಗಿರುತ್ತದೆ. ಎಚ್.ಎ.ಎಲ್ ರಕ್ಷಣೆಗೆ ನಾವು ಬದ್ಧವಾಗಿರುತ್ತೇವೆ ಎಂದು ರಾಹುಲ್ ಗಾಂಧಿ ಪ್ರತಿಕ್ರಯಸಿದರು.

       ಯು.ಪಿ.ಎ ಅವಧಿಯಲ್ಲಿ ನಾವು ಎಚ್.ಎ.ಎಲ್ ಮೂಲಕ ರಫೆಲ್ ವಿಮಾನ ತಯಾರಿಸುವ ಗುತ್ತಿಗೆ ನೀಡಬೇಕೆಂದು ಒಪ್ಪಂದ ಸಿದ್ಧಪಡಿಸಿದ್ದೇವು. ಎಚ್.ಎ.ಎಲ್ ರಕ್ಷಣಾ ಉತ್ಪನಗಳನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ಸುಖೋಯ್, ತೇಜಸ್‍ನಂತಹ ವಿಮಾನಗಳನ್ನು ಎಚ್.ಎ.ಎಲ್ ಉತ್ಪಾದನೆ ಮಾಡಿರುವುದೇ ಅದರ ಪ್ರತಿಷ್ಠೆಗೆ ಸಾಕ್ಷಿಯಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link