ಬರಗೂರು
ಗ್ಯಾಸ್ ಸಿಲಿಂಡರ್ ಮನೆಗೆ ತರುವ ಮೂದಲು ಪರೀಕ್ಷಿಸಿ ಮನೆಗೆ ತನ್ನಿ ಮುಂದಾಗುವ ಅನಾಹುತದಿಂದ ಪಾರಗುವುದು ಅಗತ್ಯವಾಗಿ ಆಗಬೇಕು, ಎನ್ಎಸ್ಎಸ್ ಶಿಬಿರಾರ್ಥಿಗಳು,ಸಾರ್ವಜನಿಕರು ಇದರ ಬಗ್ಗೆ ಜಾಗೃತರಾಗಿರಬೇಕು ಎಂದು ಸಿರಾ ಅಗ್ನಿಶಾಮಕ ಠಾಣಾಧಿಕಾರಿ ವೈ.ವಿ. ಹನುಮಂತರಾಯಪ್ಪ ತಿಳಿಸಿದರು.
ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಬರಗೂರು ಸಮೀಪದ ನಾರಗೊಂಡನಹಳ್ಳಿ ಗ್ರಾಮದಲ್ಲಿ ಬರಗೂರಿನ ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜಿನವತಿಯಿಂದ 2018-19ನೇ ಸಾಲಿನ ಎನ್.ಎಸ್.ಎಸ್ ಶಿಭಿರದಲ್ಲಿ ಅಗ್ನಿಶಾಮನ ಅನಾಹುತಗಳ ಮತ್ತು ಮುಂಜಾಗ್ರತಾ ಕ್ರಮಗಳು ಮತ್ತು ಅಗ್ನಿ ಆಮನ, ಅಗ್ನಿಶಮನ ಪ್ರಾತ್ಯಾಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಗ್ಯಾಸ್ ಸಿಲಿಂಡರ್ ಸಂಪರ್ಕ ಮಾಡುವಾಗ ರಬ್ಬರ್ ಹಾಳಗಿದೆಯೋ ಸುರಕ್ಷಿತವಾಗಿದೆಯೋ ಎಂದು ಖಾತಿರಿ ಪಡಸಿ ಇಲ್ಲದಿದ್ದಾರೆ ಗ್ಯಾಸ್ ಲೀಕ್ ಆಗಿ ಜೀವಕ್ಕೆ ಹಾನಿತರುವುದು, ಬೆಂಕಿ ಎಂದರೆ ಯಾರಿಗೆ ತಾನೆ ಭಯ ಇರಲ್ಲ ಪ್ರತಿಯೋಬ್ಬರಲ್ಲೂ ಇರುತ್ತೆ ಇದನ್ನು ಶಮನ ಮಾಡುವುದು ತುಂಬ ಶ್ರಮದ ಕೆಲಸ ಜಾಗೃತಿ ಅಗತ್ಯವಾಗಿರಲಿ ಎಮದರು.
ಬರಗೂರು ಜ್ಞಾನಜ್ಯೋತಿ ಪಪೂ ಕಾಲೇಜಿನ ಪ್ರಾಂಶುಪಾಲ ಡಿ.ಎನ್.ಪರಮೇಶ್ಗೌಡ, ಉಪನ್ಯಾಸಕರಾದ ಕೆಹೆಚ್ರವಿ, ಶಿಬಿರಾಧಿಕಾರಿ ಜಿ.ಎನ್.ಮೂರ್ತಿ,ಪತ್ರಕರ್ತರಾದ ವಲಿಸಾಬ್ಬರಗೂರು, ವೀರಭ್ರಸ್ವಾಮಿ ಇತರರು ಇದ್ದರು. .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ