ನೀಲಾನಹಳ್ಳಿ:-
ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿತು ತಂದೆ ತಾಯಿಯರಿಗೆ ಗೌರವ ತರಬೇಕೆಂದು ಸಿ.ವಿ.ಅಂಜಿನಪ್ಪ ಹರವಿ ನುಡಿದರು. ಅವರು ಇಂದು ನಡೆದ ದಾವಣಗೆರೆಯ ಶ್ರೀ ಡಿ.ಮಂಜುನಾಥ ಪದವಿ ಪೂರ್ವ ಕಾಲೇಜು ಮತ್ತೂ ಶ್ರೀ ಎಸ್.ಎಲ್.ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಬಿ.ಪಿ.ಕೆಂಚಪ್ಪ ವಹಿಸದ್ದರು,ಎಸ್.ಡಿ.ಎಮ್.ಸಿ ರಮೇಶ,ಗ್ರಾಮ ಪಂಚಾಯತ ಸದಸ್ಯ ಸೋಮನಾಯ್ಕ ಮಾತನಡಿದರು.ವೇದಿಕೆಯಲ್ಲಿ ಅಭಿನಂದನ,ಮಧುಕುಮಾರ,ಜಿ.ಬಿ.ಹಾವೇರಿ ಮೊದಲಾದವರಿದ್ದರು.ಸ್ವಾಗತ ಅನುಷಾ,ನಿರೂಪಣೆ ಅಂಬಿಕಾ,ಅಶ್ವಿನಿ ವಂದಿಸಿದರು.
