ಹುಳಿಯಾರು ಫುಟ್ ಪಾತ್ ಗೂಡಂಗಡಿಗಳ ಶೀಘ್ರ ಎತ್ತಂಗಡಿ

ಹುಳಿಯಾರು:

      ಹುಳಿಯಾರು ಖಾಸಗಿ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ದಶಕಗಳಿಂದ ತಲೆ ಎತ್ತಿರುವ ಫುಟ್ ಪಾತ್ ಗೂಡಂಗಡಿಗಳನ್ನು ಶೀಘ್ರದಲ್ಲೇ ಎತ್ತಂಗಡಿ ಮಾಡಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

     ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿದ ಸ್ವಚ್ಚ ಭಾರತ ಅಭಿಯಾನ ಕಾಲ್ನಡಿಗೆ ಜಾಥಾದ ಮುಂದುವರಿದ ಭಾಗವಾಗಿ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಶಿಬಿರದ ಸಮಾರೋಪ ಸಮಾರಂಭದ ಅಂಗವಾಗಿ ಸೋಮವಾರ ಹುಳಿಯಾರಿನಿಂದ ಚಿಕ್ಕಬಿದರೆಗೆ ಏರ್ಪಡಿಸಿದ್ದ ಕಾಲ್ನೆಡಿಗೆ ಜಾಥದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

       ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ 150 ಕಿಮೀ ಪಾದಾಯಾತ್ರೆ ಮಾಡುವಂತೆ ಪ್ರಧಾನಿಗಳು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಬೆಂಬಲವಾಗಿ ತಾವೂ ಕೂಡ ಗಾಂಧೀ ಜಯಮತಿಯಂದು ಪಾದಯಾತ್ರೆ ನಡೆಸಿದ್ದು ಇದರ ಮುಂದುವರಿದ ಭಾಗವಾಗಿ ಹುಳಿಯಾರಿನಿಂದ ಚಿಕ್ಕಬಿದರೆ ಗ್ರಾಮಕ್ಕೆ ಪಾದಯಾತ್ರೆ ಮೂಲಕ ತೆರಳಿ ಅಲ್ಲಿನ ಎನ್‍ಎಸ್‍ಎಸ್ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರಲ್ಲದೆ ಗಾಂಧೀಜಿಯವರು ಸ್ವಚ್ಚತೆಗೆ ಆದ್ಯತೆ ನೀಡಿದ್ದರಿಂದ ಪಾದಾಯಾತ್ರೆಯಲ್ಲಿ ಸ್ವಚ್ಚತೆಗೆ ಒತ್ತು ನೀಡಲಾಗುತ್ತಿದ್ದು ರಸ್ತೆಯ ಇಕ್ಕೆಲಗಳನ್ನು ಕ್ಲೀನ್ ಮಾಡಲಾಗುತ್ತದೆ ಎಂದರು.

         ಪ್ರಾರಂಭದಲ್ಲಿ ಹುಳಿಯಾರು ಬಸ್ ನಿಲ್ದಾಣ ಕ್ಲೀನ್ ಮಾಡಲಾಗಿದ್ದು ಇಲ್ಲಿನ ಅನೈರ್ಮಲ್ಯಕ್ಕೆ ಅಕ್ರಮ ಫುಟ್ ಪಾತ್ ಅಂಗಡಿಗಳು ಕಾರಣವಾಗಿರುವ ಅಂಶ ಬೆಳಕಿಗೆ ಬಂದಿದೆ. ಪ್ಲಾಸ್ಟಿಕ್ ಟೀ ಕಪ್, ಗುಟುಕ, ಬಿಸ್ಕೇಟ್ ಕವರ್, ಹಣ್ಣಿನ ಸಿಪ್ಪೆಗಳು, ಹೂವುಗಳು ಬಸ್ ನಿಲ್ದಾಣದಲ್ಲಿ ಅವರವರ ಅಂಗಡಿ ಬಳಿ ಬಿದ್ದಿದ್ದರೂ ಕ್ಲೀನ್ ಮಾಡದೆ ತಾತ್ಸಾರ ಮಾಡುತ್ತಿದ್ದಾರೆ. ಅಲ್ಲದೆ ಪೌರಕಾರ್ಮಿಕರು ಕ್ಲೀನ್ ಮಾಡಲಾಗದಂತೆ ಅಂಗಡಿಗಳನ್ನಿಟ್ಟುಕೊಂಡಿದ್ದಾರೆ. ಹಾಗಾಗಿ ಬಸ್ ಸ್ಟಾಂಡ್‍ನಲ್ಲಿನ ಅಕ್ರಮ ಅಂಗಡಿಗಳನ್ನು ಮೊದಲು ತೆರವು ಮಾಡಿಸಲು ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

        ಜಿಪಂ ಸದಸ್ಯೆ ಮಂಜಮ್ಮ, ತಾಲೂಕು ಬಿಜೆಪಿ ಅಧ್ಯಕ್ಷ ಶಶಿಧರ್, ಪ್ರಧಾನ ಕಾರ್ಯದರ್ಶಿ ನಿರಂಜನ್, ತಾಪಂ ಸದಸ್ಯರುಗಳಾದ ಕೇಶವಮೂರ್ತಿ, ಶ್ರೀಹರ್ಷ, ಮಾಜಿ ತಾಪಂ ಸದಸ್ಯರುಗಳಾದ ಕೆಂಕೆರೆ ನವೀನ್, ಸೀತರಾಮಯ್ಯ, ಆರ್.ಪಿ.ವಸಂತಯ್ಯ, ಹೊಸಹಳ್ಳಿ ಜಯಣ್ಣ , ಮುಖಂಡರುಗಳಾದ ನಂದಿಹಳ್ಳಿ ಶಿವಣ್ಣ, ಕೋಳಿಶ್ರೀನಿವಾಸ್, ಹೇಮಂತ್, ಮಚ್ ಬಸವರಾಜು, ವಿಶ್ವನಾಥ್, ಕಿಟ್ಟಪ್ಪ, ರಾಮಣ್ಣ, ಮಲ್ಲೇಶಣ್ಣ, ಜಯಸಿಂಹ, ಧನಂಜಯ್ಯ ಮತ್ತಿತರರು ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link