ಸೂಟ್‍ಕೇಸ್ ನಲ್ಲಿ ಮಾಡಲ್ ಶವ ಸಾಗಿಸಿದ ವಿಧ್ಯಾರ್ಥಿ ಬಂಧನ

ಮುಂಬೈ: 

     ಭಾರತದಲ್ಲಿ ವಾಣಿಜ್ಯ ಮಾರುಕಟ್ಟೆ ಒಂದು ಕಡೆ ಬೆಳೆಯುತ್ತಿದ್ದರೆ ಇನ್ನೊಂದು ಕಡೆ ಪಾತಕ ಲೋಕವು ಬೆಳೆಯುತ್ತಿದೆ ಅದರಲ್ಲೂ ಅಪ್ರಾಪ್ತರ ಪಾತಕಗಳು ದಿನೇದಿನೆ ಹೆಚ್ಚಾಗುತ್ತಲೇ ಇದೆ . ಇಲ್ಲೊಬ್ಬ ವಿದ್ಯಾರ್ಥಿ ಮಾಡೆಲ್ ಒಬ್ಬಾಕೆಯನ್ನು ಬರ್ಬರವಾಗಿ ಹತ್ಯೆಗೈದು ಶವವನ್ನು ಸೂಟ್‍ಕೇಸ್‍ನಲ್ಲಿ ತುಂಬಿ ಬಿಸಾಕಿದ ಪ್ರಕರಣವೊಂದು ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

     ಹತ್ಯೆಗೀಡಾದ ಮಾನ್ಸಿ ದೀಕ್ಷಿತ್ ಮೂಲತಹ ರಾಜಸ್ತಾನಿನವರು ಮತ್ತು ಅವರು ಮುಂಬೈನ ಇನ್ಫಿನಿಕ್ಸ್ ಮಾಲ್ ನ ಪಕ್ಕದಲ್ಲಿಯೆ ಅವರ ಕಚೇರಿಯು ಇತ್ತು ಎಂದು ತಿಳಿದು ಬಂದಿದೆ.ಅವರನ್ನು 20 ವರ್ಷದ ಮುಜಾಮಿಲ್ ಸೈಯಿದ್ ಎಂಬಾತ  ಹತ್ಯೆ ಮಾಡಿ ಅಂಧೇರಿಯಿಂದ  ಶವವನ್ನು ಸೂಟ್‍ಕೇಸ್‍ನಲ್ಲಿ ತೆಗೆದುಕೊಂಡು ಹೋಗಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

      ಅಂತರ್ಜಾಲದ ಮುಖೇನ ಪರಿಚಯವಾದ ಮಾನ್ಸಿ ಹಾಗೂ ಸೈಯಿದ್‍ ಸೋಮವಾರ ಮಧ್ಯಾಹ್ನ ಅಂಧೇರಿಯ ಅಪಾರ್ಟ್‍ಮೆಂಟ್‍ನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ತನ್ನ ಕಾಮ ತೃಷೇ ತೀರಿದ ಬಳಿಕ ಮಾತಿಗೆ ಮಾತು ಬೆಳೆಸಿ ಸೈಯಿದ್ ಕೈಗೆ ಸಿಕ್ಕ ಸುತ್ತಿಗೆಯಂತಹ ವಸ್ತುವಿನಿಂದ ಹಲ್ಲೆ ನೆಡೆಸಿದ್ದಾನೆ,ಈ ವೇಳೆ ಮಾನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಶವವನ್ನು ಸೂಟ್‍ಕೇಸ್ ನಲ್ಲಿ ತುಂಬಿಕೊಂಡು ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದಾನೆ. ಇದನ್ನು ಗಮನಿಸಿದ ಕ್ಯಾಬ್ ಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪ್ರಕರನ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ .

The spot where Mansi's body was found

 

       ಪೊಲೀಸರು ಮಾಡೆಲ್ ಶವವನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link