ಜಗಳೂರು :
ಖಾಯಿಲೆಗಳಿಂದ ಬರುವ ರೋಗಿಗಳಿಗೆ ಸಕಾಲದಲ್ಲಿ ವೈದ್ಯರುಗಳು ಸ್ಪಂದಿಸಿ ಚಿಕಿತ್ಸೆ ನೀಡಬೇಕೆಂದು ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಆರೊಗ್ಯ ರಕ್ಷ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ಪತ್ರೆ ಎಂಬುವುದು ದೇವಾಲಯವಿದ್ದಂತೆ ವೈದ್ಯರುಗಳು ದೇವರಿದ್ದಂತೆ ಸಾರ್ವಜನಿಕರು ಸಹ ವೈದ್ಯರುಗಳಿಗೆ ಸಹಕಾರ ನೀಡಬೇಕು. ವೈದ್ಯರು ಸಹ ಸಾರ್ವಜನಿಕರಿಗೆ ಸಹಕರಿಸಬೇಕು. ತಾಲೂಕು ಬರದ ನಾಡಗಿದ್ದು ಇಲ್ಲಿ ಬಡ ವರ್ಗದವರೆ ವಾಸಿಸುತ್ತಿದ್ದು ಜೀವನ ನಡೆಸುವುದೇ ಕಷ್ಟವಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳು ಹಣ ಪಡೆಯುವಂತ ಕೆಲಸಕ್ಕೆ ಕೈ ಹಾಕಬೇಡಿ. ಔಷಧಿಗಳಿಗೆ ಖಾಸಗಿ ಅಂಗಡಿಗಳಿಗೆ ಬರೆಯಬೇಡಿ ಎಂದು ವೈದ್ಯರುಗಳಿಗೆ ಸಲಹೆ ನೀಡಿದರು.
ನನ್ನ ಹೆಸರು ಹೆಳಿಕೊಂಡು ಯಾರದರು ಬಂದು ವೈದ್ಯರ ಮೇಲೆ ಒತ್ತಡ ಹಾಕಿದರೇ ಅಂತವರನ್ನು ನನ್ನ ಹತ್ತಿರ ಕಳುಹಿಸಿ ಎಂದು ವೈದ್ಯರಿಗೆ ಶಾಸಕರು ಸೂಚನೆ ನೀಡಿದರು
ಆಸ್ಪತ್ರೆ ಆಡಳಿತಾಧಿಕಾರಿ ಮುರುಳಿಧರ್ ಮಾತನಾಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಶೌಚಲಯದ ಅವಶ್ಯಕತೆ ಇದೆ. ಕುಡಿಯುವ ನೀರಿನ ಸಮಸ್ಯೆ ಇದ್ದು ಬೋರ್ ವೆಲ್ನ ಅವಶ್ಯಕತೆ ಇದೆ ಆಸ್ಪತ್ರೆ ದುರಸ್ಥಿಗಾಗಿ ಆರೋಗ್ಯ ರಕ್ಷಾ ಸಮಿತಿಯ ಅನುದಾನದಲ್ಲಿ ಬಳಸಿಕೊಂಡು ದುರಸ್ಥಿಪಡಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ. ನಾಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಕುಮಾರಿ , ತಾಲೂಕು ಆರೋಗ್ಯಧಿಕಾರಿ ವೈದ್ಯರುಗಳಾದ ಸಂಜಯ್, ಮಲ್ಲಪ್ಪ, ಸಿಬ್ಬಂದಿಗಳಾದ ಸುರೇಶ್ , ಕಿಫಾಯತ್, ಮಿನಾಕ್ಷಮ್ಮ ಮುಖಂಡರಾದ ತಿಪ್ಪೇಸ್ವಾಮಿ, ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ