ಶಬರಿಮಲೆ ದೇಗುಲ ಪ್ರವೇಶ ನಿರಾಕರಿಸಿ ಮಹಿಳಾ ಭಕ್ತರ ಮೇಲೆ ಕಲ್ಲು ತೂರಾಟ

ಕೇರಳ:

      ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರಾಕರಿಸಿ, ಕಲ್ಲು ತೂರಾಟ ನಡೆಸಿದ ಪ್ರಸಂಗ ಇಂದು ನಡೆದಿದೆ.

      ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿಗೆ ಆದೇಶಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಇಂದು ದೇಗುಲ ಪ್ರವೇಶಿಸುವ ಸಲುವಾಗಿ ತೆರಳುತ್ತಿದ್ದ ಮಹಿಳಾ ಭಕ್ತರ ವಾಹನದ ಮೇಲೆ ದಾರಿ ಮಧ್ಯೆ ಕಲ್ಲು ತೂರಾಟ ನಡೆಸಿದ್ದಾರೆ.

ಶಬರಿ ಮಲೆ : ಮಹಿಳೆಯರ ಪ್ರವೇಶಕ್ಕೆ ಅಸ್ತು ಎಂದ ಸುಪ್ರೀಂ..!

      ಶಬರಿಮಲೆ ದೇಗುಲ ಪ್ರವೇಶಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್ ಸೆಪ್ಟೆಂಬರ್ 28 ರಂದು ಪ್ರವೇಶಕ್ಕೆ ಅನುಮತಿ ನೀಡಿ, ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ದೇಗುಲ ಪ್ರವೇಶಿಸುವ ಸಲುವಾಗಿ ಮಹಿಳೆಯರು ಇಂದು ಶಬರಿಮಲೆಗೆ ತೆರಳುತ್ತಿದ್ದರು.

      ಶಬರಿಮಲೆಯಿಂದ 20 ಕಿಲೋಮೀಟರ್​ ದೂರದಲ್ಲಿರುವ ನೀಲಕಲ್ಲಿನ ಬಳಿ ಪ್ರತಿಭಟನಾಕಾರರು, ಅದರಲ್ಲೂ ಹೆಚ್ಚಾಗಿ ಮಹಿಳೆಯರು ಅಯ್ಯಪ್ಪನ ನಾಮಜಪ ಮಾಡುತ್ತಾ, ಮಹಿಳೆಯರು ಶಬರಿಮಲೆಯನ್ನು ಪ್ರವೇಶಿಸಬಾರದೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ಕೆಲ ಪತ್ರಕರ್ತರ ಮೇಲೂ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. 

      ಶಬರಿಮಲೆಗೆ ತೆರಳಬೇಕಿದ್ದರೆ ಮೊದಲು ಗಡಿಭಾಗವಾದ ನೀಲಕ್ಕಲ್ ದಾಟಿ ನಂತರ ಪಂಪ ನದಿಯಲ್ಲಿ ಸ್ನಾನ ಮಾಡಿ ಬೆಟ್ಟ ಹತ್ತಿ ಶಬರಿಮಲೆ ದೇವಾಲಯಕ್ಕೆ ತೆರಳಬೇಕು. ಈ ನಿಟ್ಟಿನಲ್ಲಿ ಪ್ರತಿಭಟನಾಕಾರರು ಮಹಿಳೆಯರನ್ನು ತಡೆಯುವ ನಿಟ್ಟಿನಲ್ಲಿ ಮಂಗಳವಾರ ಸಂಜೆಯಿಂದ ನೀಲಕ್ಕಲ್ ನಲ್ಲಿ ಠಿಕಾಣಿ ಹೂಡಿದ್ದು, ಈ ಸಂದರ್ಭದಲ್ಲಿ ಮಹಿಳಾ ಭಕ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

      ನಿಲಕ್ಕಲ್‌ ಪ್ರದೇಶವನ್ನು ಪೊಲೀಸರು ಪೂರ್ಣ ಹತೋಟಿಗೆ ತೆಗೆದುಕೊಂಡಿದ್ದು, ಮಹಿಳೆಯರ ಪ್ರವೇಶಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದ ಹಲವು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಮಹಿಳಾ ಪೊಲೀಸರು ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

      ಪಂಪಾ ನದಿಯ ಕಡೆಗೆ ತೆರಳುತ್ತಿದ್ದ ವಾಹನಗಳನ್ನು ನಿಲ್ಲಿಸಿ ಪ್ರತಿಭಟನಾಕಾರರು ಮಹಿಳೆಯರನ್ನು ಕೆಳಗಿಳಿಸುತ್ತಿರುವುದು ವರದಿಯಾದ ಬೆನ್ನಲೇ ಪೊಲೀಸರು ಕಠಿಣ ಕ್ರಮವಹಿಸಿದ್ದಾರೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap