ಶಿರಾ
ನಗರದಲ್ಲಿ ಐತಿಹಾಸಿಕ ಪ್ರಸಿದ್ಧ ಶ್ರೀ ದುರ್ಗಮ್ಮದೇವಿ ದಸರಾ ಮಹೋತ್ಸವದ ಅಂಗವಾಗಿ ವಿಜಯ ದಶಮಿ ಹಬ್ಬವಾದ ಶುಕ್ರವಾರದಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಈರಗಾರ ಗುಡಿಯಿಂದ ಶ್ರೀ ದುರ್ಗಮ್ಮ ದೇವಸ್ಥಾನಕ್ಕೆ ಕಳಸವನ್ನು ಹೊತ್ತು ತರುವ ಪೂಜಾ ವಿಧಾನಗಳನ್ನು ಅದ್ದೂರಿಯಾಗಿ ಕೈಗೊಳ್ಳಲಾಗಿತ್ತು. ಶಾಸಕ ಬಿ.ಸತ್ಯನಾರಾಯಣ್ ಈರಗಾರ ಗುಡಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಗುಡಿಯಲ್ಲಿನ ಕಳಸವನ್ನು ದುರ್ಗಮ್ಮ ದೇವಸ್ಥಾನಕ್ಕೆ ಹೊತ್ತು ತರಲಾಯಿತು. ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ದುರ್ಗ ಅನ್ನ ಸಂತರ್ಪಣಾ ಮಂಡಳಿ, ದಸರಾ ದೀಪಾಲಂಕಾರ ಸಮಿತಿ, ನವರಾತ್ರಿ ಉತ್ಸವ ಮತ್ತು ಪೂಜಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮೆರವಣಿಗೆಲ್ಲಿ ಪಾಲ್ಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
