ಬರಗೂರು:
ದುಷ್ಟಶಕ್ತಿಗಳ ನಿಗ್ರಹ, ಶಿಷ್ಟಶಕ್ತಿಗಳ ರಕ್ಷಣೆಗಾಗಿ ವಿಜಯದಶಮಿ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತೆ ಮಾರಕ್ಕ ಸಣ್ಣಚಿತ್ತಯ್ಯ ತಿಳಿಸಿದರು.
ವಿಜಯದಶಮಿ ಅಂಗವಾಗಿ ನಡೆದ ಮಾರಮ್ಮ, ರಂಗಪ್ಪ, ಚಿತ್ತಯ್ಯ ದೇವರುಗಳು ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು
ಪಾಂಡವರು ಅಜ್ಞಾತವಾಸಕ್ಕೆ ತೆರಳುವಾಗ ತಮ್ಮ ಆಯುಧಗಳೆಲ್ಲವನ್ನು ಚರ್ಮದ ಚೀಲದಲ್ಲಿ ಸುತ್ತಿ ಶಮೀವೃಕ್ಷದಲ್ಲಿ ಇಟ್ಟಿದ್ದರು. ಅಜ್ಞಾತವಾಸ ಮುಗಿದ ಬಳಿಕ ಹಿಂತಿರುಗಿ ಆಯುಧಗಳನ್ನು ಶಮೀವೃಕ್ಷದಿಂದ ತೆಗೆದುಕೊಂಡು ದುಷ್ಟಕೌರವರನ್ನು ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಸಂಹರಿಸಿ, ಸತ್ಯ ಮತ್ತು ಧರ್ಮಕ್ಕೆ ಜಯ ಎಂಬುದನ್ನು ಸಾಧಿಸಿದ ಸಂಕೇತವಾಗಿ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.
ವಿಜಯದಶಮಿ ಅಂಗವಾಗಿ ದೊಡ್ಡಬಾಣಗೆರೆ ಗೊಲ್ಲರ ಹಟ್ಟಿಯಲ್ಲಿನ ಮಾರಮ್ಮ, ರಂಗಪ್ಪ, ಚಿತ್ತಯ್ಯ ದೇವರುಗಳನ್ನು ಅಲಂಕರಿಸಿಕೊಂಡು ಓಬಳ ನಾಯಕರ ಹೊಲದಲ್ಲಿ ಇರುವ ಶಮೀವೃಕ್ಷಕ್ಕೆ ಮೆರವಣಿಗೆಯಲ್ಲಿ ತೆರಳಿ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಲಾಯಿತು.
ಗ್ರಾಮದೇವತೆಗಳಾದ ಮಲ್ಲಿಗೆವನದ ಮಲ್ಲೇಶ್ವರ ಸ್ವಾಮಿ, ಕಲ್ಲುಗುಡಿಯಮ್ಮದೇವಿ, ಆಂಜನೇಯ ಸ್ವಾಮಿ, ಶ್ರೀದೇವಿ,ಚಾಮುಂಡೇಶ್ವರಿ ದೇವಿ, ಕರಿಯಮ್ಮ ದೇವಿ, ಕರುವುಗಲ್ಲಮ್ಮ, ವೀರಭದ್ರಸ್ವಾಮಿ, ಕೋಟೆಮಾರಮ್ಮ, ಮಡಿವಾಳರ ಲಕ್ಷ್ಮೀದೇವರು, ಲಕ್ಷ್ಮೀರಂಗನಾಥ ಸ್ವಾಮಿ, ಹಳ್ಳದ ರಂಗನಾಥ ಸ್ವಾಮಿ, ಕನ್ನೇರಮ್ಮ ದೇವಿ, ಏಳುಮಂದಮ್ಮ ದೇವಿ,ಕೋಟೆ ಒಳಗಿನ ವೀರಭದ್ರ ಸ್ವಾಮಿ, ಛಲವಾದಿಗಳ ಹಟ್ಟಿಯಲ್ಲಿನ ಲಕ್ಷ್ಮೀದೇವರು ಮತ್ತು ಮಾದಿಗರ ಹಟ್ಟಿಯಲ್ಲಿನ ಗಲ್ಲೆದೇವರು ಹಾಗೂ ಲಕ್ಷ್ಮೀದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ವಿಜಯದಶಮಿ ಆಚರಿಸಲಾಯಿತು.
ಇದೇ ದಿನ ಹಿರಿಯರ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ಹಬ್ಬಿತ್ತು. ಗ್ರಾಮದ ಮುಖಂಡರೆಲ್ಲರೂ ಹಬ್ಬದಲ್ಲಿ ಭಾಗವಹಿಸಿದ್ದರು.ಜಿಲ್ಲಾಪಂಚಾಯಿತಿ ಸದಸ್ಯ ಎಸ್,ರಾಮಕೃಷ್ಣಯ್ಯ, ಮುಖಂಡರಾದ ಬಿ.ಜಿ.ಗುಜ್ಜಾರಪ್ಪ, ಅಜ್ಜೇಗೌಡ, ಗ್ರಾಮಪಂಚಾಯಿತಿ ಸದಸ್ಯ ರಾಮಚಂದ್ರಪ್ಪ, ಚಂದ್ರಮೌಳಿ, ಗುರುಮೂರ್ತಿ, ರಂಗನಾಥಪ್ಪ, ನಿವೃತ್ತ ಪೊಲೀಸು ಅಧಿಕಾರಿ ಕಪಿಲೆ ಕೃಷ್ಣಪ್ಪ, ನರಸಿಂಹಮೂರ್ತಿ ನಾಯಕ, ಬಿ.ಜಿ.ಉಮೇಶ್, ರವೀಂದ್ರ ಮಂಜುನಾಥ್, ಶ್ರೀಧರ್, ಜೆಸಿಬಿ ಈರಣ್ಣ, ಶಿಕ್ಷಕ ತಿಪ್ಪೇಸ್ವಾಮಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








