ಬೆಂಗಳೂರು
ಮಡಿಕೇರಿಯಲ್ಲಿ ದಶಮಂಟಪಗಳ ಮೆರವಣಿಗೆಯೊಂದಿಗೆ ನಾಡ ಹಬ್ಬ ದಸರಾಗೆ ತೆರೆ ಬಿದ್ದಿದೆ. ಪ್ರವಾಹದ ಹಿನ್ನೆಲೆಯಲ್ಲಿ ಈ ಬಾರಿ ಸಂಪ್ರದಾಯಿಕ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಲಾಯಿತು. ಮಡಿಕೇರಿಯ ವಿವಿಧೆಡೆಗಳಿಂದ ದೇವಾನುದೇವತೆಗಳ ಉತ್ಸವ ಮೂರ್ತಿಗಳನ್ನು ಹೊತ್ತ ದೀಪಾಲಂಕೃತ ಮಂಟಪಗಳು ರಾತ್ರಿಯಿಡಿ ಮಡಿಕೇರಿ ನಗರದಲ್ಲಿ ಮೆರವಣಿಗೆ ತೆರಳಿದವು ದಶ ಮಂಟಪಗಳ ವ್ಯಭವವವನ್ನು ಸಹಸ್ರಾರು ಜನ ಕಣ್ತುಂಬಿಕೊಂಡರು. ಬೆಳಗ್ಗೆ ಬನ್ನಿ ಮಂಟಪದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬನ್ನಿ ಕಡಿಯುವ ಮೂಲಕ ದಸರಾ ಉತ್ಸವ ಮುಕ್ತಾಯ ಕಂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
