ಬೆಂಗಳೂರು:
ರಾಜ್ಯದ ಉತ್ತರ ಒಳನಾಡಿನಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದೆ. ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ.
ಪುತ್ತೂರು, ಮಡಿಕೇರಿ, ಎಚ್.ಡಿ. ಕೋಟೆಯಲ್ಲಿ ತಲಾ 4 ಸೆಂಟಿಮೀಟರ್, ಸೋಮವಾರಪೇಟೆ, ಸರಗೂರು, ತಿಪಟೂರಿನಲ್ಲಿ 3, ಕದ್ರಾದಲ್ಲಿ 2, ಮೂಡುಬಿದರೆ, ಲೋಂಡಾ, ಸವಣೂರು, ಶೃಂಗೇರಿ ಹಾಗೂ ಮಂಡ್ಯದಲ್ಲಿ ತಲಾ 1 ಸೆಂಟಿಮೀಟರ್ ಮಳೆಯಾಗಿದೆ.
ಕಾರವಾರದಲ್ಲಿ 34.8 ಡಿಗ್ರಿ ಗರಿಷ್ಠ ಹಾಗೂ ಬಾಗಲಕೋಟೆಯಲ್ಲಿ 17.4 ಕನಿಷ್ಠ ತಾಪಮಾನ ದಾಖಲಾಗಿದೆ. ಮುನ್ಸೂಚನೆಯಂತೆ ಕರಾವಳಿಯ ಹಲವೆಡೆ, ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಅಲ್ಲಲ್ಲಿ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
