ಹಿರಿಯೂರಿನಲ್ಲಿ ವಿಜಯದಶಮಿ ಅದ್ದೂರಿ ಅಂಬಿನೋತ್ಸವ ಆಚರಣೆ

ಹಿರಿಯೂರು :

       ನಗರದಲ್ಲಿ ಶುಕ್ರವಾರದಂದು ವಿಜಯದಶಮಿ ಅಂಗವಾಗಿ ಸಂತೆಪೇಟೆ ಬನ್ನಿ ಮಂಟಪದ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರದ ಎಲ್ಲಾ ದೇವರುಗಳು ಆಗಮಿಸಿದ್ದು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯನವರು ಸಾಂಪ್ರದಾಯಕ ಉಡುಪು ದರಿಸುವ ಮೂಲಕ ಬನ್ನಿಮರ ಮತ್ತು ದೇವರಿಗೆ ಹಾಗೂ ಬಿಲ್ಲು ಬಾಣಕ್ಕೆ ಪೂಜೆ ಸಲ್ಲಿಸಿದ ನಂತರ ಬಿಲ್ಲನ್ನು ಏದೆಗೇರಿಸಿ ಬನ್ನಿ ಮರಕ್ಕೆ ಬಾಣ ಹೊಡೆಯುವ ಮೂಲಕ ವಿಯದಶಮಿಯ ಅಂಬಿನೋತ್ಸವವನ್ನು ನಡೆಸಲಾಯಿತು.

      ಈ ಕಾರ್ಯಕ್ರಮಕ್ಕೆ ಆರಂಭದಲ್ಲಿ ಕ್ಷೇತ್ರದ ಶಾಸಕರಾದ ಶ್ರೀಮತಿ ಕೆ.ಪೂರ್ಣಿಮ ಶ್ರೀನಿವಾಸ್ ಬನ್ನಿಮರಕ್ಕೆ ಹಾಗೂ ದೇವರಿಗೆ ಪೂಜೆ ಸಲ್ಲಿಸಿ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು. ಅಂಬಿನೋತ್ಸವ ಮುಗಿಯುತ್ತಿದ್ದಂತೆ ನೆರದ್ದಿದ ಅಪಾರ ಸಂಖ್ಯೆಯ ಭಕ್ತರು ಬನ್ನಿಮರದಿಂದ ಬನ್ನಿಪತ್ರೆ ಕಿತ್ತುಕೊಂಡು ಪರಸ್ಪರ ಹಂಚಿಕೊಳ್ಳುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡರು.

       ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮುಖಂಡರಾದ ಡಿ.ಟಿ.ಶ್ರೀನಿವಾಸ್, ನಗರಸಭೆಅಧ್ಯಕ್ಷರಾದ ಶ್ರೀಮತಿ ಮಂಜುಳ ಹಾಗೂ ನಗರಸಭೆಸದಸ್ಯರುಗಳಾದ ಟಿ.ಚಂದ್ರಶೇಖರ್, ಜಿ ಪ್ರೇಮ್ ಕುಮಾರ್, ಚಿರಂಜೀವಿ, ವನಿತಾ, ತಿಪ್ಪಮ್ಮ, ಬಿಜೆಪಿ ಮುಖಂಡರಾದ ಎಂ.ಎಸ್.ರಾಘವೇಂದ್ರ, ಕೇಶವಮೂರ್ತಿ, ಗೋಪಿನಾಥ್, ವೆಂಕಟೇಶ್, ರವೀಂದ್ರನಾಥ್, ಭೋಜನಾಯಕ, ಬನ್ನಿ ಮಂಟಪದ ಸಮಿತಿ ಸದಸ್ಯರಾದ ರಾಜಪ್ಪ ಹಾಗೂ ಪದಾಧಿಕಾರಿಗಳು, ಅನೇಕ ಮುಖಂಡರು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link