ದಾವಣಗೆರೆ:
ನಿರ್ದೇಶಕ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ನಟ ಸುದೀಪ್ ಅವರು ಶಿವರಾಜ್ ಕುಮಾರ್ ಅವರಿಗೆ ಹೊಡೆಯುವ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಒತ್ತಾಯಿಸಿ ಶಿವರಾಜ್ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕರ್ನಾಟಕ ಸಮರ ಸೇನೆಯ ಕಾರ್ಯಕರ್ತರು ಜಂಟಿಯಾಗಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಅಶೋಕ ಚಿತ್ರ ಮಂದಿರ ಎದುರು ಜಮಾಯಿಸಿದ ಶಿವರಾಜಕುಮಾರ್ ಅಭಿಮಾನಿಗಳು, ಸೆನ್ಸಾರ್ ಮಂಡಳಿ ತಕ್ಷಣವೇ ದಿ ವಿಲನ್ ಚಿತ್ರದಲ್ಲಿ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯವನ್ನು ತಕ್ಷಣವೇ ತಗೆದುಹಾಕಬೇಕೆಂದು ಘೋಷಣೆ ಕೂಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಯೋಗೇಶ್ ಮಾತನಾಡಿ, ‘ದಿ ವಿಲನ್’ ಚಿತ್ರ ಅತ್ಯತ್ತಮವಾಗಿ ಮೂಡಿಬಂದಿದೆ. ಅಲ್ಲದೆ, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಒಳ್ಳೆಯ ಕಲೆಕ್ಷನ್ ಸಹ ಆಗುತ್ತಿದೆ. ನಟರಾದ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರುಗಳ ಅಭಿನಯ ಇನ್ನೂ ಚೆನ್ನಾಗಿದೆ. ಆದರೆ, ಸಿನಿಮಾದಲ್ಲಿ ಸುದೀಪ್ ಶಿವಣ್ಣಗೆ ಹೊಡೆಯುವ ಸೀನ್ ಬೇಡ. ಅದನ್ನು ನಿದೇರ್ಶಕ ಪ್ರೇಮ್ ಅವರು ತೆಗೆದುಹಾಕಿ ಬೇರೆ ರೀತಿಯಲ್ಲಿ ಕ್ಲೆಮಾಕ್ಸ್ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸಮರ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಿ. ವಾಸುದೇವ ಮಾತನಾಡಿ, ಚಿತ್ರದಲ್ಲಿ ನಟ ಸುದೀಪ್ ಅವರು ಶಿವರಾಜಕುಮಾರ್ ಅವರಿಗೆ ಹೊಡೆಯುವ ದೃಶ್ಯದಿಂದ ಶಿವಣ್ಣನವರ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. ಆದ್ದರಿಂದ ಈ ಕೂಡಲೇ ಆ ದೃಶ್ಯವನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಚಿತ್ತೂರು ಕರಿಬಸಪ್ಪ, ಪ್ರಕಾಶ್, ಹನುಮಂತ, ಆವರಗೆರೆ ಪರಮೇಶ್, ಅಂಜನಿ, ಪರಶುರಾಮ್, ಸಿದ್ದೇಶ್, ಕೋಠಿ, ಪ್ರತಾಪ್, ಹೇಮಂತ್, ಪ್ರಕಾಶ್, ಆಂಜನೇಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ