ಹರಿಹರ :
ನಗರದ ಹಳೆ ಪಿ.ಬಿ ರಸ್ತೆಯ ಹಾಗೂ ಪಕ್ಕದ ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಗರ ಸಭೆ ಹಾಗೂ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಎಸ್. ರಾಮಪ್ಪ ಆದೇಶಿಸಿದರು.
ನಗರದ ಬೀರೂರು-ಸಮ್ಮಸಗಿ ರಸ್ತೆಯ ಕಾಮಗಾರಿಯ ಪರಿಶೀಲಿಸಲು ಔಪಚಾರಿಕ ಬೇಟಿ ನೀಡಿದ ಸಂದರ್ಭದಲ್ಲಿ ಗಾಂಧಿನಗರ ನಿವಾಸಿಗಳು ಇತ್ತೀಚೆಗೆ ಸುರಿದ ಬಾರಿ ಮಳೆಗೆ ಚರಂಡಿಗಳ ದುರಸ್ಥಿಯಾಗದ ಕಾರಣ ನಮ್ಮ ಬಡಾವಣೆಯಲ್ಲಿ ಕೇಲವು ಭಾಗದಲ್ಲಿ ನೀರಿನಿಂದ ಆವೃತ್ತವಾಗಿದ್ದು , ನಮಗೆ ಬಹಳ ತೊಂದರೆಯಾಗುತ್ತಿದೆ ಎಂದು ದೂರಿದ್ದರ ಹಿನ್ನಲೆಯಲ್ಲಿ ಶಾಸಕರು ಸಂಬಂದಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕಾಮಗಾರಿಗಳ ಮಾಹಿತಿ ಪಡೆದು ತುರ್ತಾಗಿ ಕಾಮಗಾರಿಗಳನ್ನು ಮುಗಿಸಲು ಸೂಚಿಸಿದರು.
ಬೀರೂರು-ಸಮ್ಮಸಗಿ ರಸ್ತೆ ಅಗಲೀಕರಣ ಕಾಮಗಾರಿಯು ಸುಮಾರು 3-4 ವರ್ಷಗಳಿಂದ ನೆಡೆಯುತ್ತಿದ್ದು ಇದುವರಿಗೂ ಪೊರ್ಣಗೊಂಡಿರುವುದಿಲ್ಲ ಅದರಿಂದ ಅಧಿಕಾರಿಗಳು ಮೊದಲು ಚರಂಡಿ ಕಾಮಗಾರಿಗೆ ಅದ್ಯತೆಯನ್ನು ನೀಡಿ ಅಕ್ಕ-ಪಕ್ಕದ ನೀವಾಸಿಗಳ ತೊಂದರೆಯನ್ನು ಬಗೆಹರಿಸಿ ಕೊಡಬೇಕೆಂದು ಹಾಗೂ ರಸ್ತೆಯ ಕಾಮಗಾರಿಯನ್ನು ಚುರುಕು ಗೊಳಿಸುವಂತೆ ಸ್ಥಳದಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು ರಸ್ತೆಯ ಕಾಮಗಾರಿಯಲ್ಲಿ ಕೆಲವು ಪ್ರತಿಷ್ಟಿತ ವ್ಯಕ್ತಿಗಳು ನ್ಯಾಯಲಯದಲ್ಲಿ ಪ್ರಕರಣಗಳನ್ನು ದಾಖಲಿಸಿರುವುದರಿಂದ ವಿಳಂಬವಾಗುತ್ತಿದ್ದು ಕೆಲವೆ ದಿನಗಳಲ್ಲಿ ಪ್ರಕರಣಗಳು ಪೂರ್ಣವಾಗುವುದರಿಂದ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಈ ವೇಳೆ ನಗರ ಸಭೆ ಸದಸ್ಯ ಎಸ್.ಎಂ ವಸಂತ ಕುಮಾರ, ಪೌರಯಕ್ತೆ ಎಸ್.ಲಕ್ಷ್ಮಿ, ಲೋಕೊಪಯೋಗಿ ಅಧಿಕಾರಿ ಎಸ್. ಈಶ್ವರಪ್ಪ, ನಗರ ಸಭೆ ಇಂಜಿನಿಯರ್‍ಗಳು, ಕಾಂಗ್ರೇಸ್ ಮುಖಂಡ ಅಮರವತಿ ಡಿ. ರೇವಣಸಿದ್ದಪ್ಪ, ಹೆಚ್. ತಿಪ್ಪೇಸ್ವಾಮಿ, ಪ್ರಸನ್ನ, ಮುನ್ನಾಪ್, ಎಂ, ನಜೀರ್ ಅಹಮದ್, ಹಾಗೂ ಗಾಂಧಿನಗರದ ನಿವಾಸಿಗಳು ಉಪಸ್ಥಿತರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ