ಎಲ್ಲೂ ನೆಮ್ಮದಿ ಕಾಣದಾದ ಮಲ್ಯ….!!!

ಬ್ರಿಟನ್: 
     
         ಭಾರತದ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ಲಂಡನ್ ನಲ್ಲಿ ಹಾಯಾಗಿದ್ದ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ಈ ಸಲ ಸ್ವಿಸ್ ಬ್ಯಾಂಕ್ ಬ್ರಿಟನ್ ಹೈಕೋರ್ಟ್ ಮೆಟ್ಟಿಲೇರದೆ, ಲಂಡನ್ ನ ರೀಜೆಂಟ್ ಪಾರ್ಕ್ ನಲ್ಲಿರುವ ಬಹುಕೋಟಿ (ಮಲ್ಟಿ ಮಿಲಿಯನ್) ಮ್ಯಾನ್ಷನ್ ನಿಂದ ವಿಜಯ್ ಮಲ್ಯ ಅವರನ್ನು ಹೊರಹಾಕುವುದಕ್ಕೆ ಅನುಮತಿ ನೀಡಬೇಕೆಂದು ಕೋರಿದೆ.
 
         ರೀಜೆಂಟ್ ಪಾರ್ಕ್ ನಲ್ಲಿರುವ ಮಲ್ಯ ಅವರ ಮಲ್ಟಿ ಮಿಲಿಯನ್ ಮ್ಯಾನ್ಷನ್ ನ್ನು ಅಡ ಇಟ್ಟಿದ್ದು, 2012 ರಲ್ಲಿ 20.4 ಮಿಲಿಯನ್ ಪೌಂಡ್ ಗಳಷ್ಟು (195 ಕೋಟಿ ರೂಪಾಯಿ) ಗಳಷ್ಟು ಹಣವನ್ನು ಸಾಲ ಪಡೆದಿದ್ದು 5 ವರ್ಷಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಆದರೆ ಈ ವರೆಗೂ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಅವರನ್ನು ಮ್ಯಾನ್ಷನ್ ನಿಂದ ಹೊರಹಾಕಲು ಅನುಮತಿ ನೀಡಬೇಕೆಂದು ಸ್ವಿಸ್ ಬ್ಯಾಂಕ್ ಬ್ರಿಟನ್ ಕೋರ್ಟ್ ಮೆಟ್ಟಿಲೇರಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ .

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link