ಗುಬ್ಬಿ
ತಾಲ್ಲೂಕಿನ ನಿಟ್ಟೂರು ಹೋಬಳಿ ಅಮ್ಮಸಂದ್ರ ಕ್ರಾಸ್ ಬಳಿಯ ಅರಣ್ಯ ಪ್ರದೇಶದಲ್ಲಿ ಸುಮಾರು 3 ರಿಂದ 4 ವರ್ಷದ ಗಂಡು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾಡು ಪ್ರಾಣಿಗಳೊಟ್ಟಿಗೆ ಗುದ್ದಾಟ ನಡೆಸಿ ಸಾವನ್ನಪ್ಪಿದ್ದು ಕೋರೆಹಲ್ಲುಗಳು ದೇಹದ ಮೇಲೆ ತಿವಿದಂತಹ ಗುರುತುಗಳು ಇದ್ದು ಕಾಡುಹಂದಿಯಂತಹ ಪ್ರಾಣಿ ಬಲವಾಗಿ ಗುದ್ದಿರಬಹುದು ಎಂದು ಪಶು ವೈದ್ಯಾಧಿಕಾರಿ ಡಾ:ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಧಿಕಾರಿ ರಮೇಶ್, ಸಿಬ್ಬಂದಿಗಳಾದ ಕರಿಯಪ್ಪ, ಬಸವರಾಜು, ಶಂಕರಪ್ಪ, ಕೇಶವಮೂರ್ತಿ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
