ಚಿತ್ರರಂಗದಿಂದ ನಟಿ ಶೃತಿ ಹರಿಹರನ್, ಸಂಜನಾ ಹಾಗೂ ನಟ ಚೇತನ್ ಬ್ಯಾನ್…!!!?

ಬೆಂಗಳೂರು : 

  ಇದೀಗ ಸ್ಯಾಂಡಲ್ ವುಡ್ ನಲ್ಲಿಯೂ #MeToo ಆರೋಪಗಳು ಒಂದೊಂದಾಗಿಯೇ ಹೊರಬರುತ್ತಿದೆ. ಸಂಜನಾ ಗಲ್ರಾಣಿಯ ಬೆನ್ನಲ್ಲೇ ನಟಿ ಶೃತಿ ಹರಿಹರನ್ ಅವರು  ನಟ ಅರ್ಜುನ್ ಸರ್ಜಾ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.  ನಟಿಯರ ಬೆಂಬಲಕ್ಕೆ ನಟ ಚೇತನ್ ನಿಂತಿದ್ದಾರೆ  ಆದರೆ  ಅರ್ಜುನ್ ಸರ್ಜಾ ಪುತ್ರಿಯ ‘ಪ್ರೇಮಬರಹ’ ಚಿತ್ರಕ್ಕೆ ನಟ ಚೇತನ್ ಆಯ್ಕೆಯಾಗಿದ್ದರು. ಈ ವೇಳೆ ಮುಂಗಡವಾಗಿ 10 ಲಕ್ಷ ರೂ. ಹಣವನ್ನು ಕೂಡ ಪಡೆದುಕೊಂಡಿದ್ದರು.

ಆದರೆ ವರ್ಕ್ ಶಾಪ್ ವೇಳೆ ಚೇತನ್ ನಟನೆ ಇಷ್ಟವಾಗದೇ ಇದ್ದಾಗ ಅರ್ಜುನ್ ಸರ್ಜಾ ಬೇರೆ ನಟನನ್ನು ಹಾಕಿಕೊಂಡು ಸಿನಿಮಾ ಮಾಡಿದ್ದರು. ಮುಂಗಡ ಹಣವನ್ನು ನೀಡುವಂತೆ ಅರ್ಜುನ್ ಸರ್ಜಾ ಕೇಳಿದ್ದರೂ ಚೇತನ್ ಹಣ ಮರು ಪಾವತಿ ಮಾಡಿರಲಿಲ್ಲ.

ಹೀಗಾಗಿ 10 ಲಕ್ಷ ರೂ. ವಾಪಸ್ ಕೊಡುವಂತೆ ಲೀಗಲ್ ನೋಟಿಸ್ ಕೂಡ ರವಾನೆ ಮಾಡಲಾಗಿತ್ತು. ಈ ನೋಟಿಸ್‍ಗೆ ಪ್ರತೀಕಾರವಾಗಿ ಈಗ ಸೇಡು ತೀರಿಸಿಕೊಳ್ಳಲು 10 ಲಕ್ಷ ರೂ. ಹಣಕ್ಕಾಗಿ ನಟ ಅರ್ಜುನ್ ಸರ್ಜಾ ವಿರುದ್ಧ ಚೇತನ್ ನಿಂತಿದ್ದಾರೆ ಎಂದು ಆರೋಪ ಮಾಡಿದ್ದಾರೆ.  ಇದರ ನಡುವೆ  ನಟ ಅರ್ಜುನ್ ಸರ್ಜಾ ಮಾವ ವಾಣಿಜ್ಯ ಮಂಡಳಿಗೆ ದೂರು ನೀಡಿದಾರೆ.

ಕರ್ನಾಟಕ ರಾಜ್ಯ ಪುರುಷರ ರಕ್ಷಣಾ ಸಮಿತಿಯಿಂದ  ಕೂಡ ಚಲನಚಿತ್ರ ಮಂಡಳಿಗೆ  ಚಿತ್ರರಂಗದಿಂದ ನಟಿ ಶೃತಿ ಹರಿಹರನ್, ಸಂಜನಾ ಹಾಗೂ ನಟ ಚೇತನ್ ಬ್ಯಾನ್ ಮಾಡುವಂತೆ   ದೂರು  ಸಲ್ಲಿಸಿದ್ದಾರೆ .

Recent Articles

spot_img

Related Stories

Share via
Copy link