ಅಪಘಾತದಲ್ಲಿ ಪ್ರಾಣ ಉಳಿಸಿದ ಶಿರಸ್ತ್ರಾಣ

ತಿಪಟೂರು: 

  ಬೆಳಗಿನ ಜಾವ 4.50ರಲ್ಲಿ ನಗರದ ಬಿ.ಹೆಚ್.ರಸ್ತೆಯ ಗುರುಕುಲ ಸೂಪರ್ ಮಾರ್ಕೆಟ್ ಹತ್ತಿರ ನಡೆದ ಅಪಘಾತದಲ್ಲಿ ಬೈಕ್ ಸವಾರ ಹಾಕಿದ್ದ ಶಿರಸ್ತ್ರಾಣವು ಸವಾರನ ಜೀವನ್ನು ಉಳಿಸಿದೆ.

   ಹೊನ್ನವಳ್ಳಿ ಪ್ರಜಾಪ್ರಗತಿ ವರದಿಗಾರರಾದ ನಂಜಪ್ಪ (45) ನವರು ಇಂದು ಬೆಳಗ್ಗೆ ಪತ್ರಿಕಾ ಕೆಲಸಕ್ಕೆ ಬರುವ ವೇಳೆ ಅರಸೀಕೆರೆಯಿಂದ ಬರುತ್ತಿದ್ದ ಕೆ.ಎ.51 ಬಿ.4369 ಖಾಸಗಿ ಬಸ್ ಅತಿ ವೇಗವಾಗಿ ಬೈಕ್‍ಗೆ ಗುದ್ದಿದ ಪರಿಣಾಮವಾಗಿ ವಾಹನ ಸವಾರರಿಗೆ ಪೆಟ್ಟುಬಿದ್ದು ಬೈಕ್ ಸಂಪೂರ್ಣವಾಗಿ ಜಖಂಗೊಂಡು ಬಸ್ ತಳಭಾಗಕ್ಕೆ ಸೇರಿದ್ದು ಅದೃಷ್ಟವಶಾತ್ ವಾಹನಸವಾರ ಶಿರಸ್ತ್ರಾಣವಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪ್ರತ್ಯಕ್ಷದರ್ಶಿಗಳು ಹೇಳುವಂತೆ ರಾತ್ರಿವೇಳೆಯಲ್ಲಿ ವಾಹನಗಳು ಅತೀವಾಗವಾಗಿ ಸಂಚರಿಸುತ್ತಿದ್ದು ಇಂತಹ ಅಪಘಾತಗಳು ಸಾಮಾನ್ಯವಾಗಿರುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ವಾಹನ ಚಾಲಕರು ಮೊಬೈಲ್ ಹೆಡ್‍ಫೋನ್‍ಗಳನ್ನು ಹಾಕಿಕೊಂಡು, ಅತ್ಯಂತ ವೇಗವಾಗಿ ವಾಹನವನ್ನು ಚಲಾಯಿಸುತ್ತಾರೆ. ಇಂತಹ ಅಪಘಾತಗಳು ನಡೆದಾಗ ವಾಹನ ಚಾಲಕರು ಬಸ್‍ಅನ್ನು ಬಿಟ್ಟು ಓಡಿಹೋಗುತ್ತಾರೆ.

   ಈ ಪ್ರಕರಣದಲ್ಲು ಇದು ಜರುಗಿದ್ದು ವಾಹನ ಚಾಲಕ ಓಡಿಹೋಗಿದ್ದಾನೆ. ಪೇಪರ್ ವಾಹನದವರು ಮತ್ತು ದಿನಪತ್ರಿಕೆ ಹಂಚುವ ಹುಡುಗರು ಬೈಕ್‍ಸವಾರರನ್ನು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link