ತುಮಕೂರು
ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟೀವ್ ಲಿಮಿಟೆಡ್‍ನ ಅಧ್ಯಕ್ಷರಾದ ಡಾ.ಎನ್.ಎಸ್. ಜಯಕುಮಾರ್ ಅವರಿಗೆ ಲಂಡನ್‍ನ ಗ್ಲೋಬಲ್ ಅಚೀವರ್ಸ್ ಕಾನ್‍ಕ್ಲೇವ್ ಸಂಸ್ಥೆಯು ಮಹಾತ್ಮಗಾಂಧಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಲಂಡನ್‍ನ ಹೌಸ್ ಆಫ್ ಕಾಮನ್ಸ್‍ನಲ್ಲಿ ಅ.25ರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಇವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ಈ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ. ಗ್ಲೋಬಲ್ ಅಚೀವರ್ಸ್ ಕಾನ್‍ಕ್ಲೇವ್‍ನ ಆಡಳಿತ ಮಂಡಳಿ ಸಭೆಯಲ್ಲಿಇವರ ಹೆಸರನ್ನು ಅನುಮೋದಿಸಿದೆ.