ಹಿರಿಯೂರು ತಾಲ್ಲೂಕು ಕಛೇರಿಯಲ್ಲಿ ವಾಲ್ಮೀಕಿ ಜಯಂತೋತ್ಸವ

ಹಿರಿಯೂರು:

       ಮಹರ್ಷಿ ವಾಲ್ಮೀಕಿ ಯಾವುದೇ ಒಂದು ಜಾತಿ-ಜನಾಂಗಕ್ಕೆ ಅಥವಾ ಸಮುದಾಯಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ, ಇಡೀ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ವ್ಯಕ್ತಿ, ವಾಲ್ಮೀಕಿಯವರ ಚಿಂತನೆಗಳು, ಆದರ್ಶಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತವಾಗಿವೆ ಎಂಬುದಾಗಿ ಚಿತ್ರದುರ್ಗದ ಸಂಸದ ಚಂದ್ರಪ್ಪ ಹೇಳಿದರು.

     ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ವೇದಾಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಿ.ಚಂದ್ರಶೇಖರ್ ಮಾತನಾಡಿ, ಸಮಾಜ ಸುಧಾರಣೆಗೆ ಶ್ರಮಿಸಿದ ಮಹನೀಯರಲ್ಲಿ ಮಹರ್ಷಿ ವಾಲ್ಮೀಕಿಯೂ ಒಬ್ಬರು. ಮನುಷ್ಯ ಇತರರಿಗೆ ಒಳಿತು ಬಯಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂಬುದನ್ನು ಅವರು ನಿರೂಪಿಸಿದರಲ್ಲದೆ ಸಮಾಜದಲ್ಲಿ ವೇದಗಳು, ಪುರಾಣಗಳು ಮತ್ತು ವಿದ್ಯೆ-ಗ್ರಂಥಗಳು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ ಎಂಬುದಾಗಿ ಇಡೀ ಜಗತ್ತಿಗೆ ತೋರಿಸಿಕೊಟ್ಟವರು ವಾಲ್ಮೀಕಿ. ಇಂತಹ ಮಹಾಚೇತನದ ಜಯಂತಿಯನ್ನು ಆಚರಿಸುವುದು ಕೂಡ ಅರ್ಥಪೂರ್ಣ ಎಂದರು.

      ಈ ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಪ್ಪ, ನಗರಸಭೆ ಅಧ್ಯಕ್ಷೆ ಶ್ರೀಮತಿ ಮಂಜುಳ, ಜಿ.ಪಂ.ಸದಸ್ಯರುಗಳಾದ ರಾಜೇಶ್ವರಿ, ಶಶಿಕಲಾಸುರೇಶ್ ಬಾಬು, ನಾಗೇಂದ್ರನಾಯ್ಕ, ನಗರಸಭೆ ಸದಸ್ಯರುಗಳಾದ ಇ.ಮಂಜುನಾಥ್, ರವಿಚಂದ್ರನಾಯ್ಕ, ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ರೈತ ಮುಖಂಡ ಹೊರಕೇರಪ್ಪ, ನಿ|| ಇಂಜಿನಿಯರ್ ಶಿವರಾಂ, ಸಮಾಜ ಕಲ್ಯಾಣ ಇಲಾಖೆ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಸಣ್ಣನೀರಾವರಿ ಇಲಾಖೆಶ್ರೀರಂಗಪ್ಪ, ಮತ್ತು ಸಮಾಜದ ಮುಖಂಡರಾದ ದಿವಾಕರನಾಯಕ, ಬಸವರಾಜ್ ನಾಯಕ, ಟಿ.ವಿ.ರಾಜು, ಹಂಪಣ್ಣಶ್ರವಣಗೆರೆ, ತಿಪ್ಪೇಸ್ವಾಮಿ, ರಮೇಶ್ ಭರಮಗಿರಿ, ಲೋಕೇಶ್ ಸಿಎನ್ ಮಾಳಿಗೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap